ಮದ್ಯದಲ್ಲಿ ಹತ್ತಾರು ವಿಧಗಳಿವೆ. ವಿಸ್ಕಿ, ವೈನ್, ಬಿಯರ್ನಂತಹ ಹಲವು ಜನಪ್ರಿಯ ಬ್ರಾಂಡ್ಗಳೂ ಇವೆ. ಅತ್ಯಂತ ದುಬಾರಿ ಬೆಲೆ ಕೊಟ್ಟು ಮದ್ಯ ಸೇವಿಸುವವರಿದ್ದಾರೆ. ಮದ್ಯವನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿ ಪಾಶ್ಚಿಮಾತ್ಯ ದೇಶಗಳಲ್ಲಿದೆ.

2026 ಮಾರ್ಚ್ ಅಂತ್ಯದ ವೇಳೆಗೆ ವಿಶ್ವದ ಅತ್ಯಂತ ದುಬಾರಿ ವೈನ್ ಮಾರಾಟವಾಗಿದೆ. ಹಾಗಾದರೆ ಈ ವೈನ್ ಬೆಲೆ ಎಷ್ಟು? ಮಾರಾಟವಾಗಿದ್ದು ಎಲ್ಲಿ, ಎಂಬುದನ್ನು ತಿಳಿಯೋಣ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಅಕರ್ನ ವಾರ್ಷಿಕ ಹರಾಜಿನಲ್ಲಿ 1945ರ ಡೊಮೈನ್ ಡೆ ಲಾ ರೊಮಾನೀ ಕಾಂಟಿ ಹೆಸರಿನ ವೈನ್ ಬಾಟಲಿ ₹7.63 ಕೋಟಿಗೆ ಮಾರಾಟವಾಗಿದೆ. ಈ ವೈನ್ ಬಾಟಲಿಯನ್ನು ಖರೀದಿಸಿರುವುದು ಯಾರು ಎಂಬುದನ್ನು ತಿಳಿದು ಬಂದಿಲ್ಲ. ಆದರೆ ಈ ಮದ್ಯ ಬಾಟಲಿಯನ್ನು ತನ್ನ ಪ್ರಿಯತಮೆಗಾಗಿ ಖರೀದಿಸಲಾಗಿದೆ ಎಂದು ಹೇಳಲಾಗಿದೆ.

1945ರ ಸುಮಾರಿಗೆ ವೈನ್ ತಯಾರಿಸುತ್ತಿದ್ದ ಮಾಸಿಯನ್ ಜೋಸೆಫ್ ಡ್ರೌಹಿನ್ ಅವರ ಕುಟುಂಬದ ಸದಸ್ಯ ರಾಬರ್ಟ್ ಡ್ರೌಹಿನ್ ಅವರ ನೆಲಮಾಳಿಗೆಯಿಂದ ಈ ವೈನ್ ಅನ್ನು ಪಡೆಯಲಾಗಿದೆ. ಈ ಮಾದರಿಯ ವೈನ್ಗಳನ್ನು ದ್ವಿತೀಯ ಮಹಾಯುದ್ಧದ ಅಂತ್ಯದ ವೇಳೆಗೆ ಸುಮಾರು 600 ಬಾಟಲಿಗಳನ್ನು ತಯಾರಿಸಲಾಗಿತ್ತು. ಉಳಿದಿರುವ ಕೆಲವು ಬಾಟಲಿಗಳಿಗೆ ಬೇಡಿಕೆ ಇದೆ.

ಈ ವೈನ್ ತಯಾರಿಸಿದ ಬಳಿಕ, ದ್ರಾಕ್ಷಿ ತೋಟವನ್ನು ಕಿತ್ತು ಹಾಕಲಾಗಿತ್ತು. ಹಾಗಾಗಿ ಈ ವೈನ್ಗೆ ಇಷ್ಟು ಬೆಲೆ ಹಾಗೂ ಬೇಡಿಕೆ ಬಂದಿವೆ ಎಂದು ವರದಿಯಾಗಿದೆ. ಹಿಂದೆ 2018 ರಲ್ಲಿ ಸೋಥೆಬಿಸ್ನ ತಂಪಾದ ವೈನ್ ₹5.21 ಕೋಟಿಗೆ ಮಾರಾಟವಾಗಿತ್ತು. ಇದೀಗ 1945ರ ಡೊಮೈನ್ ಡೆ ಲಾ ರೊಮಾನೀ ಕಾಂಟಿ ಹೆಸರಿನ ವೈನ್ ಬಾಟಲಿ ವಿಶ್ವದ ಅತ್ಯಂತ ದುಬಾರಿ ವೈನ್ ಪಟ್ಟಿಗೆ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.