ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಜಗತ್ತಿನ ಅತಿ ಹಿರಿಯ 'ನಾಯಿ'

Published 15 ಮೇ 2023, 16:17 IST
Last Updated 15 ಮೇ 2023, 16:17 IST
ಅಕ್ಷರ ಗಾತ್ರ

ಕಾಂಕ್ವೈರಸ್‌ (ಪೋರ್ಚುಗಲ್) : ಜಗತ್ತಿನ ಅತಿ ಹಿರಿಯ ನಾಯಿ ಇತ್ತೀಚೆಗೆ ತನ್ನ 31ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದು ಗಿನ್ನೆಸ್‌ ವಿಶ್ವ ದಾಖಲೆಗೆ ಸೇರಿದೆ.

ಬೊಬಿ 1992ರಲ್ಲಿ ಜನಿಸಿತ್ತು. ಸದ್ಯ ನಾಯಿಯು ನಡೆದಾಡಲು ಕಷ್ಟಪಡುತ್ತಿದೆ, ಅದರ ದೃಷ್ಟಿಯು ಮಂಜಾಗಿದೆ. ಹೆಚ್ಚು ಕಾಲ ಮಲಗೇ ಇರುತ್ತದೆ ಎಂದು ಮಾಲೀಕ ಲಿಯೊನಲ್‌ ಕೋಸ್ಟಾ ತಿಳಿಸಿದ್ದಾರೆ.

ಸ್ವಚ್ಛಂದ ಪರಿಸರದಲ್ಲಿ ಬದುಕಿದ್ದೇ ಈ ನಾಯಿಯ ದೀರ್ಘ ಬದುಕಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ನಾಯಿಯನ್ನು ಚೈನ್‌ನಿಂದ ಕಟ್ಟಿ ಹಾಕಿದ್ದೇ ಇಲ್ಲ. ಅದು ಮುಕ್ತವಾಗಿ ಸುತ್ತಮುತ್ತಲಿನ ಕಾಡಿನಲ್ಲಿ ಸುತ್ತಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT