ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು ವಿತರಣೆ ವೇಳೆ ಯೆಮನ್‌ನಲ್ಲಿ ಕಾಲ್ತುಳಿತ: 85 ಸಾವು, 322 ಮಂದಿಗೆ ಗಾಯ

Last Updated 20 ಏಪ್ರಿಲ್ 2023, 4:34 IST
ಅಕ್ಷರ ಗಾತ್ರ

ಸನಾ: ಯುದ್ಧ ಪೀಡಿತ ಯೆಮನ್‌ನಲ್ಲಿ ಗುರುವಾರ ನೆರವು ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 85ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 322 ಮಂದಿ ಗಾಯಗೊಂಡಿದ್ದಾರೆ ಎಂದು ಹೂತಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಈ ದಶಕದಲ್ಲೇ ಸಂಭವಿಸಿದ ಅತ್ಯಂತ ಭೀಕರ ಕಾಲ್ತುಳಿತಗಳಲ್ಲಿ ಒಂದೆನಿಸಿದೆ.

ಯೆಮನ್‌ ರಾಜಧಾನಿಯ ಹೂತಿ ನಿಯಂತ್ರಿತ ಜಿಲ್ಲೆ ಬಾಬ್ ಅಲ್-ಯೆಮನ್‌ನಲ್ಲಿ ಈ ದುರ್ಘಟನೆ ನಡೆದಿದೆ.

‘ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಲು ಯಮೆನ್‌ನಲ್ಲಿ ಅಧಿಕಾರಿಗಳಿಗೆ ನಿರ್ಬಂಧವಿದೆ.

ರಂಜಾನ್‌ ಪವಿತ್ರ ಮಾಸದಲ್ಲೇ ಸಂಭವಿಸಿರುವ ಈ ದುರಂತ ಅರೆಬಿಯಾದ ಬಡರಾಷ್ಟ್ರ ಯೆಮನ್‌ಅನ್ನು ಶೋಕಕ್ಕೆ ದೂಡಿದೆ.

‘ಕೆಲ ವ್ಯಾಪಾರಿಗಳು ಸರ್ಕಾರದ ಆಂತರಿಕ ಸಚಿವಾಲಯದ ಗಮನಕ್ಕೆ ತಾರದೇ ಬುಧವಾರ ಸಂಜೆ ಜನರಿಗೆ ನೆರವಿನ ರೂಪದಲ್ಲಿ ಹಣ ವಿತರಿಸಿದ್ದಾರೆ. ಆಗ ಈ ಘಟನೆ ನಡೆದಿದೆ‘ ಎಂದು ಹೂತಿ ನಿಯಂತ್ರಿತ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಖಾಲಿದ್‌ ಅಲ್-ಅಜ್ರಿ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ಮೃತರು ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ನೆರವು ವಿತರಣಾ ಕಾರ್ಯಕ್ರಮ ಆಯೋಜಿಸಿದ್ದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೂತಿ ಆಂತರಿಕ ಸಚಿವಾಲಯವು ಸುದ್ದಿ ಸಂಸ್ಥೆ ‘ಸಬಾ ನ್ಯೂಸ್‌ಗೆ’ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT