ಕೀವ್ (ಎಪಿ): ‘ ಸುಮಾರು 700 ಕಿ.ಮೀ. ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲ ಹೊಸ ಶಸ್ತ್ರಾಸ್ತ್ರವನ್ನು ಉಕ್ರೇನ್ ಅಭಿವೃದ್ಧಿಪಡಿಸಿದೆ’ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಗುರುವಾರ ಹೇಳಿದ್ದಾರೆ.
ಪಶ್ಚಿಮ ರಷ್ಯಾದ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ‘ಟೆಲಿಗ್ರಾಂ’ ಚಾನೆಲ್‌ನಲ್ಲಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸ್ಥಳೀಯ ವರದಿಗಳ ಪ್ರಕಾರ, ಬುಧವಾರ ಪಶ್ಚಿಮ ರಷ್ಯಾದ ಎಸ್ಟೋನಿಯಾ ಮತ್ತು ಲಾಟ್ವಿಯಾ ಗಡಿ ಸಮೀಪದಲ್ಲಿರುವ ವಿಮಾನನಿಲ್ದಾಣದ ಮೇಲೆ ಉಕ್ರೇನ್ ದಾಳಿ ಮಾಡಿದ್ದು, ನಾಲ್ಕು ಮಿಲಿಟರಿ ವಿಮಾನಗಳನ್ನು ಹಾನಿಗೊಳಿಸಿದೆ ಎಂದು ರಷ್ಯಾವು ಹೇಳಿದೆ.
ದಾಳಿ ಮಾಡಿದ ಸ್ಥಳವು ಉಕ್ರೇನ್‌ನ ಉತ್ತರ ಭಾಗದ ಗಡಿಯಿದ ಸುಮಾರು 700 ಕಿ.ಮೀ. ದೂರದಲ್ಲಿದ್ದು, ದಾಳಿಯ ಹೊಣೆಯನ್ನು ಉಕ್ರೇನ್ ಹೊತ್ತುಕೊಂಡಿಲ್ಲ, ಅಂತೆಯೇ ನಿರಾಕರಿಸಿಯೂ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.