‘ಪತ್ರಿಕೆ, ಪುಸ್ತಕ ಬದುಕಿಗೆ ಸದಾ ಸಹಕಾರಿ’

7
ಸಬ್‌ ಇನ್‌ಸ್ಪೆಕ್ಟರ್‌ ಸೋಮಶೇಖರ್ ಕಿವಿಮಾತು

‘ಪತ್ರಿಕೆ, ಪುಸ್ತಕ ಬದುಕಿಗೆ ಸದಾ ಸಹಕಾರಿ’

Published:
Updated:
Deccan Herald

ಬೆಂಗಳೂರು: ‘ಶಾಲಾ ದಿನಗಳಲ್ಲಿಯೇ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಮತ್ತು ಪುಸ್ತಕಗಳು ನಮ್ಮ ಬದುಕಿನ ಸಾಧನೆಯ ಹಾದಿಗೆ ಬೆಳಕು ನೀಡುವ ದೀಪಗಳು’ ಎಂದು ಸೋಲದೇವನಹಳ್ಳಿ ಸಬ್‌ ಇನ್‌ಸ್ಪೆಕ್ಟರ್‌ ಸೋಮಶೇಖರ್ ಕಿವಿಮಾತು ಹೇಳಿದರು.

ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪ್ರಜಾವಾಣಿ’ ಹಾಗೂ ವಿದ್ಯಾರ್ಥಿ ಸಂಚಿಕೆ ‘ಸಹಪಾಠಿ’ ವಿತರಿಸಿ ಅವರು ಮಾತನಾಡಿದರು.

‘ಕುವೆಂಪು, ಬೇಂದ್ರೆ, ಶಿವರಾಮಕಾರಂತರಂತಹ  ಜ್ಞಾನಿಗಳು ಪುಸ್ತಕಗಳನ್ನು ಓದುತ್ತಲೇ ಹದವಾದರು. ಓದುವುದರಿಂದ ನಮ್ಮ ಬದುಕಿನಲ್ಲಿ ವಿನಯ ಮೂಡುತ್ತದೆ. ಸಂಸ್ಕಾರ ಬೆಳೆಯುತ್ತದೆ. ಪುಸ್ತಕಗಳು ಬದುಕಿನ ನಿಜವಾದ ಸಹಪಾಠಿ’ ಎಂದರು.

‘ಸರ್ಕಾರಿ ಶಾಲೆ ಎನ್ನುವ ಅಸಡ್ಡೆ ಭಾವನೆಯನ್ನು ದೂರ ತಳ್ಳಿ, ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿಯೇ ಎನ್ನುವುದನ್ನು ಈಗಿನ ಮಕ್ಕಳು ತಿಳಿಯಬೇಕು. ಮುಂದೆ ಗುರಿ, ಹಿಂದೆ ಗುರು ಇರಿಸಿಕೊಂಡು ಓದುವ ಮನಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು’ ಎಂದು ಹೇಳಿದರು.

ಸಮಾಜ ಸೇವಕ ಕಿರಣ್, ‘ನಾನು ಇದೇ ಶಾಲೆಯಲ್ಲಿ ಓದಿದವನು. 50 ವರ್ಷಗಳ ಇತಿಹಾಸವಿರುವ ಈ ಶಾಲೆಯ ಮಕ್ಕಳಿಗೆ ಪ್ರಜಾವಾಣಿ ಪತ್ರಿಕೆ ಓದಿಸಲು ನೆರವಾಗುವುದು ಖುಷಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯ ದಿನದಂದೇ ಪತ್ರಿಕೆ ಸಿಕ್ಕಿದೆ. ಪತ್ರಿಕೆ ಹಿಡಿಯುವುದಕ್ಕೆ ಖುಷಿ ಎನಿಸುತ್ತದೆ. ಬೇರೆಯವರು ಓದುವುದನ್ನು ನೋಡ್ತಾ ಇದ್ದೆ. ಈಗ ನಾನೇ ನಿತ್ಯ ಪತ್ರಿಕೆಯನ್ನು ಓದುತ್ತೇನೆ’ ಎಂದು 5ನೇ ತರಗತಿ ವಿದ್ಯಾರ್ಥಿ ಅಂಜನ್‌ ಹೇಳಿದನು.

‘ಮಹಿಳೆಯರ ಬಗ್ಗೆ ಬರುವ ಎಲ್ಲ ಸುದ್ದಿಗಳನ್ನು ಚಾಚೂ ತಪ್ಪದೇ ಓದುತ್ತೇನೆ. ಅಪ್ಪ–ಅಮ್ಮ ಇಬ್ಬರೂ ಓದಿಲ್ಲ. ಇನ್ನು ಮೇಲೆ ನಾನೂ ಪತ್ರಿಕೆ ಓದಿ ಅವರಿಗೂ ಓದಿ ಹೇಳುತ್ತೇನೆ. ಪತ್ರಿಕೆ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ನಿಜಕ್ಕೂ ಖುಷಿಯಾಗುತ್ತದೆ’ ಎಂದು 5ನೇ ತರಗತಿ ವಿದ್ಯಾರ್ಥಿನಿ ಸುಮಿತ್ರ ಸಂತಸ ವ್ಯಕ್ತಪಡಿಸಿದಳು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !