ಶುಕ್ರವಾರ, ನವೆಂಬರ್ 22, 2019
25 °C

ಹೋಟೆಲ್ ಬಿಲ್ ₹ 8.23 ಲಕ್ಷ ಪಾವತಿಸದೇ ಪರಾರಿ

Published:
Updated:

ಬೆಂಗಳೂರು: ಹಲಸೂರಿನಲ್ಲಿರುವ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದ ನೈಜೀರಿಯಾದ ನಾಲ್ವರು ₹ 8.23 ಲಕ್ಷ ಬಿಲ್ ಪಾವತಿಸದೇ ಪರಾರಿಯಾಗಿದ್ದಾರೆ.

ಈ ಸಂಬಂಧ ಹೋಟೆಲ್ ಭದ್ರತಾ ವ್ಯವಸ್ಥಾಪಕ, ಭಾರತಿನಗರ ಠಾಣೆಗೆ ದೂರು ನೀಡಿದ್ದಾರೆ. ವಂಚನೆ (ಐಪಿಸಿ 420) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಾಗಿದೆ.

‘ನೈಜೀರಿಯಾದವರು ಎನ್ನಲಾದ ಟೋನಿ ರೈಡ್, ಪೀಟರ್ ಪ್ರಿನ್ಸ್‌ ಹಾಗೂ ಸ್ನೇಹಿತರು, ಜುಲೈ 28ರಂದು ಹೋಟೆಲ್‌ಗೆ ಬಂದಿದ್ದರು. ನಾಲ್ಕು ದಿನ ಉಳಿದುಕೊಂಡು ಹಲವು ಸವಲತ್ತುಗಳನ್ನು ಪಡೆದಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಪ್ರತಿಕ್ರಿಯಿಸಿ (+)