ಭೂಮಿ ಇಲ್ಲ; ಬಿತ್ತನೆ ಬೀಜ ಏಕೆ?; ಸೂಲಿಕೆರೆ ವಿಶೇಷ ಗ್ರಾಮಸಭೆಯಲ್ಲಿ ಪ್ರಶ್ನೆ

7

ಭೂಮಿ ಇಲ್ಲ; ಬಿತ್ತನೆ ಬೀಜ ಏಕೆ?; ಸೂಲಿಕೆರೆ ವಿಶೇಷ ಗ್ರಾಮಸಭೆಯಲ್ಲಿ ಪ್ರಶ್ನೆ

Published:
Updated:
Deccan Herald

ಬೆಂಗಳೂರು: ಉಳುಮೆಗೆ ಭೂಮಿಯೇ ಇಲ್ಲ. ಬಿತ್ತನೆಗೆ ಬೀಜವೇಕೆ ಎಂಬ ಪ್ರಶ್ನೆ ಸೂಲಿಕೆರೆ ಗ್ರಾಮಪಂಚಾಯಿತಿ ವಿಶೇಷ ಗ್ರಾಮಸಭೆಯಲ್ಲಿ ಕೇಳಿ ಬಂತು.

ಕೃಷಿ ಅಧಿಕಾರಿ ಸಭೆಯಲ್ಲಿ ವಿವರ ನೀಡಿ, ಶೇ 50ರಷ್ಟು ಕಡಿಮೆ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು. ಅರ್ಹ ಫಲಾನುಭವಿಗಳು ಕೃಷಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಗ್ರಾಮದ ಮಹಿಳೆಯರು ಇರುವ ಜಮೀನನ್ನು ಸರ್ಕಾರವೇ ವಶಪಡಿಸಿಕೊಂಡಿದೆ. ಇನ್ಯಾವ ಭೂಮಿಯಲ್ಲಿ ನೀವು ನೀಡುವ ಬೀಜ ಬಿತ್ತಬೇಕು ಎಂದು ಅಧಿಕಾರಿಯ ಕಾಲೆಳೆದರು. ಮಹಿಳೆಯರು ನೀಡಿದ ಉತ್ತರವು ಕೃಷಿ ಅಧಿಕಾರಿಯನ್ನು ತಡಕಾಡುವಂತೆ ಮಾಡಿತು.

ಸ್ತೀ ಶಕ್ತಿ ಸಂಘಕ್ಕೆ ದೊರಕಬೇಕಿದ್ದ ಪ್ರೋತ್ಸಾಹಧನ, ಸಹಾಯಧನ ಸಿಗುತ್ತಿಲ್ಲ ಎಂಬ ದೂರು ಗ್ರಾಮದ ಮಹಿಳೆಯರಿಂದ ಕೇಳಿ ಬಂದಿತು. ಅಂಗನವಾಡಿ ಕಟ್ಟಡಕ್ಕೆ ಕಾರ್ಯಕರ್ತರು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ ಬೇಕು, ಭಾಗ್ಯಲಕ್ಷ್ಮೀ ಯೋಜನೆಯ ಸವಲತ್ತು ಪಡೆಯಲು ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಮಹಿಳೆಯರು
ಒತ್ತಾಯಿಸಿದರು.

ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ‘ಶೀಘ್ರದಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಗೂ ಹೆಚ್ಚುವರಿ ಹಣ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !