ಭಾರತದ ಗಣರಾಜ್ಯೋತ್ಸವಕ್ಕೆ ಟ್ರಂಪ್ ಭೇಟಿ ಇನ್ನೂ ನಿರ್ಧಾರವಾಗಿಲ್ಲ: ಶ್ವೇತಭವನ

7

ಭಾರತದ ಗಣರಾಜ್ಯೋತ್ಸವಕ್ಕೆ ಟ್ರಂಪ್ ಭೇಟಿ ಇನ್ನೂ ನಿರ್ಧಾರವಾಗಿಲ್ಲ: ಶ್ವೇತಭವನ

Published:
Updated:
Deccan Herald

ವಾಷಿಂಗ್ಟನ್‌ : ‘ಭಾರತಕ್ಕೆ ಭೇಟಿ ನೀಡುವಂತೆ ಕಳುಹಿಸಿರುವ ಆಹ್ವಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಸ್ವೀಕರಿಸಿದ್ದು, ಭೇಟಿ ನೀಡುವ ಕುರಿತಂತೆ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಮಂಗಳವಾರ ಶ್ವೇತಭವನ ಸ್ಪಷ್ಟಪಡಿಸಿದೆ.

‘ನನಗೆ ತಿಳಿದ ಪ್ರಕಾರ ಆಹ್ವಾನವು ತಲುಪಿದ್ದು, ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ತಿಳಿಸಿದರು. 2019ರಲ್ಲಿ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು.

‘ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌  ಜೊತೆಗೆ 2+2 ಸಭೆ ನಡೆಸುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ರಕ್ಷಣಾ ಇಲಾಖೆ ಕಾರ್ಯದರ್ಶಿ ಜೇಮ್ಸ್‌ ಮ್ಯಾಟಿಸ್‌ ಅವರು ಆದಷ್ಟು ಶೀಘ್ರ ನವದೆಹಲಿಗೆ ಭೇಟಿ ನೀಡಲಿದ್ದಾರೆ’ ಎಂದು ಅವರು ತಿಳಿಸಿದರು.

‘ಮುಂದಿನ ವರ್ಷ ಅಧ್ಯಕ್ಷ ಟ್ರಂಪ್ ಭೇಟಿಗೆ ಅನುಗುಣವಾಗಿ ಸೆಪ್ಟೆಂಬರ್‌ನಲ್ಲಿ ಈ ಸಭೆ ನಡೆಯಲಿದೆ’ ಎಂದು ಸ್ಯಾಂಡರ್ಸ್‌ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !