ಹೆಲ್ಮೆಟ್‌ ಇಲ್ಲದಿದ್ದರೆ ಪೆಟ್ರೋಲ್‌ ಇಲ್ಲ!

7

ಹೆಲ್ಮೆಟ್‌ ಇಲ್ಲದಿದ್ದರೆ ಪೆಟ್ರೋಲ್‌ ಇಲ್ಲ!

Published:
Updated:

ಢಾಕಾ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ಇದ್ದರೆ, ಪೆಟ್ರೋಲ್‌ ನೀಡದಂತೆ ಪೊಲೀಸರು ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ತಿಳಿಸಿದ್ದಾರೆ.

ಇತ್ತೀಚೆಗೆ ಇಬ್ಬರು ಪಾದಚಾರಿಗಳು ಬಸ್‌ ಅಪಘಾತದಿಂದ ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಜನರು ರಸ್ತೆ ಸುರಕ್ಷತೆ ಉತ್ತಮ ಪಡಿಸಬೇಕು ಎಂದು ಕಳೆದ ತಿಂಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೈಕ್‌ನಲ್ಲಿ ಇಬ್ಬರು ಪ್ರಯಾಣಿಕರು ಮಾತ್ರವೇ ಪ್ರಯಾಣಿಸಬೇಕು. ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದು ಮೆಟ್ರೊಪಾಲಿಟನ್‌ ಪೊಲೀಸ್ ಆಯುಕ್ತ ಅಸದ್ಸುಮಾಮನ್ ಮಿಯಾ ತಿಳಿಸಿದ್ದಾರೆ.  

 

 

 

ಬರಹ ಇಷ್ಟವಾಯಿತೆ?

  • 2

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !