ವೈಮಾನಿಕ ಪ್ರದರ್ಶನಕ್ಕೆ ರಫೇಲ್‌ ಇಲ್ಲ

3

ವೈಮಾನಿಕ ಪ್ರದರ್ಶನಕ್ಕೆ ರಫೇಲ್‌ ಇಲ್ಲ

Published:
Updated:
Deccan Herald

ಬೆಂಗಳೂರು: ಕೇಂದ್ರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರದ ಕೇಂದ್ರ ಬಿಂದುವಾಗಿರುವ ರಫೇಲ್‌ ಜೆಟ್‌ ಯುದ್ಧವಿಮಾನವು ನಭದಲ್ಲಿ ನಡೆಸುವ ಕಸರತ್ತುಗಳನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಕಾದಿದೆ. 2019ರ ಫೆಬ್ರವರಿ 20ರಿಂದ 24ರವರೆಗೆ ನಗರದಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಈ ಯುದ್ಧ ವಿಮಾನಗಳು ಭಾಗವಹಿಸುತ್ತಿಲ್ಲ.

‘ನಗರದ ಹೊರವಲಯದ ಯಲಹಂಕದ ವಾಯುನೆಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನದ 12ನೇ ಆವೃತ್ತಿಯಲ್ಲಿ ರಫೇಲ್‌ ಯುದ್ಧ ವಿಮಾನ ಕಸರತ್ತು ನಡೆಸುವುದಿಲ್ಲ. ಬದಲಿಗೆ 'ಡಸಾಲ್ಟ್‌ ಏವಿಯೇಷನ್' ಕಂಪನಿಯ ಇತರೆ ವಿಮಾನಗಳು ಹಾರಾಟ ನಡೆಸುತ್ತವೆ ಎಂಬ ನಿರೀಕ್ಷೆ ನಮ್ಮದು’ ಎಂದು ಏರ್‌ ಮಾರ್ಷಲ್‌ ಆರ್‌.ಕೆ. ಸಿಂಗ್‌ ಬಡೇರಿಯ ತಿಳಿಸಿದರು.

‘ಇಷ್ಟು ವರ್ಷ ರಕ್ಷಣಾ ಪ್ರದರ್ಶನ ಸಂಘಟನೆ ವೈಮಾನಿಕ ಪ್ರದರ್ಶನ ಸಂಘಟಿಸುತ್ತಿತ್ತು. ಆದರೆ, ಈ ಬಾರಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಪ್ರಮುಖ ಪಾತ್ರವಹಿಸಲಿದೆ’ ಎಂದು ಹೇಳಿದರು.

36 ರಫೇಲ್‌ ಯುದ್ಧ ವಿಮಾನಗಳ ಪೂರೈಕೆಗೆ ಸಂಬಂಧಿಸಿ ಕೇಂದ್ರ ಸರ್ಕಾರ, ಫ್ರಾನ್ಸ್‌ನ 'ಡಸಾಲ್ಟ್‌ ಏವಿಯೇಷನ್'  ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2019ರ ಸೆಪ್ಟೆಂಬರ್‌ ವೇಳೆಗೆ ಈ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದೆ. ರಷ್ಯಾ ನಿರ್ಮಿತ ಮಿಗ್‌ 21 ಜೆಟ್ ವಿಮಾನಗಳ ಸ್ಥಾನವನ್ನು ರಫೇಲ್‌ ಜೆಟ್‌ ಯುದ್ಧ ವಿಮಾನಗಳು ತುಂಬಲಿವೆ.

‘ಪ್ರಧಾನಿ ನರೇಂದ್ರ ಮೋದಿ ಪ್ರದರ್ಶನ ಉದ್ಘಾಟಿಸಲಿದ್ದಾರೆ’ ಎಂದು ಬಡೇರಿಯ ತಿಳಿಸಿದರು.

ಬರಹ ಇಷ್ಟವಾಯಿತೆ?

  • 6

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !