‘ಗಣೇಶ ಪ್ರತಿಷ್ಠಾಪನೆಗೆ ಶುಲ್ಕ ಇಲ್ಲ’

7
ಮೇಯರ್‌ ಸ್ಪಷ್ಟನೆ

‘ಗಣೇಶ ಪ್ರತಿಷ್ಠಾಪನೆಗೆ ಶುಲ್ಕ ಇಲ್ಲ’

Published:
Updated:

ಬೆಂಗಳೂರು: ‘ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪ ಪಾಲಿಕೆ ಮುಂದೆ ಇಲ್ಲ’ ಎಂದು ಮೇಯರ್‌ ಸಂಪತ್‌ರಾಜ್‌ ಸ್ಪಷ್ಟಪಡಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗಣೇಶ ಪ್ರತಿಷ್ಠಾಪನೆಗೆ ಶುಲ್ಕ ವಿಧಿಸಲಾಗುತ್ತದೆ ಎಂದು ವದಂತಿ ಹಬ್ಬಿಸಲಾಗಿದೆ. ಅಂತಹ ಯಾವುದೇ ನಿರ್ಧಾರವನ್ನು ನನ್ನ ಆಡಳಿತಾವಧಿಯಲ್ಲಿ ಪಾಲಿಕೆ ತೆಗೆದುಕೊಂಡಿಲ್ಲ. ಪ್ರತಿವರ್ಷದಂತೆಯೇ ಈ ವರ್ಷವೂ ಮುಕ್ತವಾಗಿ ಈ ಹಬ್ಬವನ್ನು ಆಚರಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದರು.

‘ಸಾರ್ವಜನಿಕ ಜಾಗದಲ್ಲಿ ಶಾಮಿಯಾನ ಅಳವಡಿಸುವುದಕ್ಕೆ ಪಾಲಿಕೆಯಿಂದ ಪರವಾನಗಿ ಪಡೆಯಬೇಕು. ಈ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಇದಕ್ಕಾಗಿ ಪ್ರತಿ ಚದರ ಅಡಿಗೆ ₹ 10ರಂತೆ ನೆಲಬಾಡಿಗೆ ಪಡೆಯಲಾಗುತ್ತದೆ. ಇದು ಕೇವಲ ಗಣೇಶ ಚತುರ್ಥಿಗೆ ಸೀಮಿತ ಅಲ್ಲ. ಯಾವುದೇ ಕಾರ್ಯಕ್ರಮಕ್ಕೆ ರಸ್ತೆಗೆ ಅಡ್ಡಲಾಗಿ ಶಾಮಿಯಾನ ಹಾಕಿದರೂ ನೆಲಬಾಡಿಗೆ ಕಟ್ಟಬೇಕಾಗುತ್ತದೆ. ಇದನ್ನೇ ತಪ್ಪಾಗಿ ಅರ್ಥೈಸಿದ ಕೆಲವರು ಗಣೇಶ ಪ್ರತಿಷ್ಠಾಪನೆಗೆ ಶುಲ್ಕ ಪಡೆಯಲಾಗುತ್ತಿದೆ ಎಂದು ಬಿಂಬಿಸಿದ್ದಾರೆ’ ಎಂದರು.

‘ಸಾರ್ವಜನಿಕರಿಂದ ಬೇಡಿಕೆ ಬಂದರೆ, ಗಣೇಶ ಚತುರ್ಥಿ ಸಂದರ್ಭದಲ್ಲಿ ಶಾಮಿಯಾನ ಅಳವಡಿಸಲು ನೆಲಬಾಡಿಗೆ ಪಡೆಯದೆಯೇ ಪರವಾನಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !