ಗುರುವಾರ , ಸೆಪ್ಟೆಂಬರ್ 23, 2021
22 °C

ಲಿಂಗಾಯತ: ಹೈಕಮಾಂಡ್‌ಗೆ ದೂರು ಎಂದ ಶಾಮನೂರು ಬೆದರಿಕೆಗೆ ಬಗ್ಗಲ್ಲ– ಎಂ.ಬಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ಹೈಕಮಾಂಡ್‌ಗೆ ದೂರು ಕೊಡುತ್ತೇನೆ ಎಂದು ಹೇಳಿರುವ ಶಾಮನೂರು ಶಿವಶಂಕರಪ್ಪ ಬೆದರಿಕೆಗೆ ಬಗ್ಗುವವನು ನಾನಲ್ಲ’ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ಮುಂಚೂಣಿ ನಾಯಕ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಗುಡುಗಿದರು.

‘ನನ್ನ ವಿರುದ್ಧ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬಂದರೂ ನಾ ಗೆದ್ದಿರುವೆ. ವಿನಯ ಕುಲಕರ್ಣಿ ಸೋಲಿಗೆ ಬೇರೆ ಕಾರಣಗಳಿವೆ. ನಿಮ್ಮ ಪುತ್ರನು ಸೋತಿದ್ದಾರಲ್ಲ. ಅದು ಏಕೆ. ನಾವು ಧರ್ಮ ಒಡೆದವರು ಸೋತಿದ್ದೇವೆ. ನೀವು ಒಟ್ಟುಗೂಡಿಸಲು ಶ್ರಮಿಸಿದವರು. ಆದರೂ ಏಕೆ ಸೋತಿರಿ’ ಎಂದು ಶನಿವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಶಾಮನೂರಿಗೆ ತಿರುಗೇಟು ನೀಡಿದರು.

‘ಕಾಂಗ್ರೆಸ್‌ ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕಾರಣವಲ್ಲ. ಇವರು ಯಾರನ್ನು ಬೆಂಬಲಿಸಿದರು ಅವರೇ ಕಾರಣ. ಶಾಮನೂರು ಇವರ ಜತೆಗೆ ಸಾಥ್‌ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಶಾಮನೂರು ಪ್ರತಿನಿಧಿಸುವ ಕ್ಷೇತ್ರದಲ್ಲಿ 70000 ಮುಸ್ಲಿಮರಿದ್ದಾರೆ. ಇದರಿಂದಲೇ ಇವರು ಗೆದ್ದಿದ್ದಾರೆ. ವಯಸ್ಸಿಗೆ ಮರ್ಯಾದೆ ಕೊಡುವೆ. ಬಿಜೆಪಿ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಉಮೇಶ ಕತ್ತಿ ಸೇರಿದಂತೆ ಇನ್ನುಳಿದ ನಾಯಕರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದಿದೆ. ಆದರೂ ಸುಮ್ ಸುಮ್ನೇ ವೀರಶೈವರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ಎಂ.ಬಿ.ಪಾಟೀಲ ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು