ಬಿಜೆಪಿಗೆ ಮತ ನೀಡಬೇಡಿ: ಸಾಗರ್

ಬುಧವಾರ, ಏಪ್ರಿಲ್ 24, 2019
23 °C

ಬಿಜೆಪಿಗೆ ಮತ ನೀಡಬೇಡಿ: ಸಾಗರ್

Published:
Updated:

ವಿಜಯಪುರ: ‘ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾದರೆ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ಜನರ ಸ್ವಾತಂತ್ರ್ಯಕ್ಕೆ ಗಂಡಾಂತರವಿದೆ. ಆದ್ದರಿಂದ ಬಿಜೆಪಿಗೆ ಮತ ನೀಡಬಾರದು’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಮನವಿ ಮಾಡಿದರು.

‘ಐದು ವರ್ಷದ ಅವಧಿಯಲ್ಲಿ ಮೋದಿ ಯಾವೊಂದು ಕೊಡುಗೆ ನೀಡಿಲ್ಲ. ಸಂವಿಧಾನವನ್ನೇ ಲಘುವಾಗಿ ಪರಿಗಣಿಸಿ, ಬದಲಾಯಿಸುವ ಮಾತನಾಡಿದರು. ಆದಿವಾಸಿಗಳು, ದಲಿತರು, ಮಹಿಳೆಯರ ಮೇಲೆ ಸರಣಿ ದೌರ್ಜನ್ಯ ನಡೆದವು’ ಎಂದು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರುಗಳ ಸುರಿಮಳೆಗೈದರು.

‘ದೇಶದಲ್ಲಿ ಇದೀಗ ಚುನಾವಣೆ ಎದುರಾಗಿದೆ. ಮೊಸಳೆ ಕಣ್ಣೀರು ಸುರಿಸಿ ಅಧಿಕಾರ ಹಿಡಿಯಲು ಬಿಜೆಪಿಗರು ಭಾವನಾತ್ಮಕ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಜಾತ್ಯತೀತರು ಮತ್ತು ಕೋಮುವಾದಿಗಳ ನಡುವೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಸಮರ್ಥ ಅಭ್ಯರ್ಥಿಗೆ ನಿಮ್ಮ ಮತ ಚಲಾಯಿಸಿ’ ಎಂದು ಸಾಗರ್‌ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !