ಶನಿವಾರ, ಮಾರ್ಚ್ 28, 2020
19 °C

‘ನೊಬೆಲ್‌ ನೀಡಿಕೆಯಲ್ಲಿ ಲಿಂಗ ತಾರತಮ್ಯ’

ಎಪಿ Updated:

ಅಕ್ಷರ ಗಾತ್ರ : | |

ಈಸ್ಟಾವೆಂಗರ್‌, ನಾರ್ವೆ: ನೊಬೆಲ್‌ ಪ್ರಶಸ್ತಿ ನೀಡಲು ಲಿಂಗ ತಾರತಮ್ಯ ಅನುಸರಿಸಲಾಗುತ್ತಿದೆ. ಮುಖ್ಯವಾಗಿ ವಿಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿ ನೀಡುವಾಗ ಮಹಿಳೆಯರನ್ನು ಪರಿಗಣಿಸುತ್ತಿಲ್ಲ ಎಂದು ಕೆಲವರು ಟೀಕೆ ಮಾಡಿದ್ದಾರೆ. 

‘1901ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈವರೆಗೆ 892 ಸಾಧಕರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆದರೆ, ಇವರಲ್ಲಿ ಮಹಿಳೆಯರ ಸಂಖ್ಯೆ 48 ಮಾತ್ರ. ಅದರಲ್ಲಿಯೂ ಈ ಪೈಕಿ 30 ಮಹಿಳೆಯರು ಸಾಹಿತ್ಯ ಮತ್ತು ಶಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ’ ಎಂದು ವ ‘ಸ್ಟೆಮೆಟ್ಟೆಸ್‌’ ಸಂಸ್ಥೆಯ ಮುಖ್ಯಸ್ಥೆ ಅನ್ನೆ ಮೇರಿ ಇಮಾಫಿಡಾನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ನೊಬೆಲ್‌ಗೆ ಸಾಧಕರ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯಲ್ಲಿಯೇ ದೋಷವಿದೆ. ಅರ್ಹರನ್ನು ಆಯ್ಕೆ ಮಾಡಬೇಕಾದ ಪ್ರೊಫೆಸರ್‌ಗಳು ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪ್ರಸಕ್ತ ಸಾಲಿನ ನೊಬೆಲ್‌ ಪುರಸ್ಕಾರಗಳನ್ನು ಸೋಮವಾರದಿಂದ ಘೋಷಿಸಲಾಗುತ್ತದೆ. ಮೊದಲಿಗೆ ವೈದ್ಯಕೀಯ ಮತ್ತು ಭೌತವಿಜ್ಞಾನ ಕ್ಷೇತ್ರದ ಸಾಧಕರ ಹೆಸರನ್ನು ಘೋಷಿಸಲಾಗುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು