ಸೋಮವಾರ, ಅಕ್ಟೋಬರ್ 26, 2020
23 °C

50 ವರ್ಷಗಳ ಹಿಂದೆ | ಶುಕ್ರವಾರ, 2–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ನಲ್ಲಿ ಸಾಲು

ಬ್ಯಾಂಕ್‌ನಲ್ಲಿ ಕ್ಯಾಷಿಯರ್ ನಂಬರ್ ಕೂಗಬೇಕಿಲ್ಲ

ಬೆಂಗಳೂರು, ಅ. 1 – ಬ್ಯಾಂಕಿಗೆ ಹೋಗಿ ಚೆಕ್‌ ಬರೆದುಕೊಟ್ಟರೆ, ಲೋಹದ ಒಂದು ‘ಟೋಕನ್‌’ ಕೂಡುತ್ತಾರೆ. ಆ ಟೋಕನ್‌ ಮೇಲೆ ಒಂದು ನಂಬರು ಇರುತ್ತದೆ. ಕೆಲವು ನಿಮಿಷಗಳ ನಂತರ ಕೌಂಟರ್‌ ಒಳಗಿರುವ ಕ್ಯಾಷಿಯರ್‌ ನಂಬರ್‌ ‘ಕೂಗು’ತ್ತಾರೆ. ಟೋಕನ್‌ ಒಳಗೆ ಸರಿಸಿದಾಗ ಹಣ ಕೈ ಸೇರುತ್ತದೆ.

ಗಾಂಧಿ ನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಇನ್ನು ಮುಂದೆ ಈ ‘ಕೂಗು’ ಇಲ್ಲ. ಅದರ ಬದಲು ಚೆಕ್ಕು ನಗದಿಗೆ ಸಿದ್ಧವಾದಾಗ ಕೌಂಟರ್‌ ಮೇಲೆ ಟೋಕನ್‌ನಲ್ಲಿರುವ ಅಂಕಿಗಳು ಕಾಣಿಸಿಕೊಳ್ಳುತ್ತವೆ. ಇದೊಂದು ಎಲೆಕ್ಟ್ರಾನಿಕ್‌ ಉಪಕರಣದ ಸಾಧನ. ಭಾರತದಲ್ಲಿಯೇ ಪ್ರಥಮ.

ವಿದ್ಯಾರ್ಥಿ ಚಳವಳಿ ಅಂತ್ಯ: ತನಿಖೆಗೆ ರಾಜ್ಯಪಾಲರ ಸಮ್ಮತಿ

ಬೆಂಗಳೂರು, ಅ. 1– ನಾಗರಿಕ ಶಾಂತಿ ಸಮಿತಿಯ ಪ್ರಯತ್ನ, ಸರ್ಕಾರ ಹಾಗೂ ವಿದ್ಯಾರ್ಥಿ ನಾಯಕರ ಸಹಕಾರದ ಫಲವಾಗಿ ಎಕ್ಸ್‌ಪೊ ನಿಯೋಗದ ಆಯ್ಕೆ ವಿರುದ್ಧ ಆಗಸ್ಟ್‌ 31ರಂದು ಆರಂಭವಾದ ಕಾಲೇಜ್‌ ವಿದ್ಯಾರ್ಥಿ ಚಳವಳಿ ಇಂದು ಮುಕ್ತಾಯವಾಯಿತು.

ಎಲ್ಲ ಸ್ವರೂಪದ ಚಳವಳಿಯನ್ನು ತತ್‌ಕ್ಷಣ ನಿಲ್ಲಿಸಿ, ತರಗತಿಗಳಿಗೆ ಹಿಂತಿರುಗಬೇಕೆಂದು ರಾಜ್ಯದಾದ್ಯಂತ ಇರುವ ಕಾಲೇಜ್‌ ವಿದ್ಯಾರ್ಥಿ
ವೃಂದಕ್ಕೆ ಬೆಂಗಳೂರು ವಿದ್ಯಾರ್ಥಿ ಕ್ರಿಯಾ ಸಮಿತಿ ಸರ್ವಾನುಮತದಿಂದ ಪ್ರಾರ್ಥಿಸಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು