ಕಾಖಂಡಕಿಯಲ್ಲಿ ಪರಿಸರ ಜಾಗೃತಿ

ಮಂಗಳವಾರ, ಜೂನ್ 18, 2019
24 °C

ಕಾಖಂಡಕಿಯಲ್ಲಿ ಪರಿಸರ ಜಾಗೃತಿ

Published:
Updated:
Prajavani

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎನ್ಎಸ್ಎಸ್ ಕೋಶದ ವತಿಯಿಂದ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ಪರಿಸರ ಜಾಗೃತಿ ಹಾಗೂ ಶಿಕ್ಷಣ ಜಾಗೃತಿ ಅಭಿಯಾನ ನಡೆಸಿದರು.

ಸ್ವಚ್ಛತಾ ಅಭಿಯಾನ ನಡೆಸಿದ ವಿದ್ಯಾರ್ಥಿಗಳು, ಗ್ರಾಮದ ದೇವಾಲಯ, ಸರ್ಕಾರಿ ಶಾಲೆ, ರಸ್ತೆಗಳನ್ನು ಶುಚಿಗೊಳಿಸುವ ಮೂಲಕ ಸುಂದರ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.

‘ಪ‍ರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’, ‘ಮನೆಗೊಂದು ಮರ ಊರಿಗೊಂದು ವನ’ ಸೇರಿದಂತೆ ವಿವಿಧ ನಾಮ ಫಲಕಗಳನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಪ್ರದರ್ಶಿಸಿದರು. ಪರಿಸರ ಪರವಾದ ಜಾಗೃತಿ ಘೋಷಣೆಗಳನ್ನು ಕೂಗಿದರು. ಪರಿಸರದಲ್ಲಿನ ತಾಪಮಾನವನ್ನು ಕಡಿಮೆಯಾಗಲು ಮರಗಳನ್ನು ಬೆಳೆಸಿ ಕಾಪಾಡಿಕೊಳ್ಳುವುದು ಅತಿ ಅವಶ್ಯ ಎಂಬ ಸಂದೇಶ ಸಾರಿದರು.

ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗುರುದೇವ ಆಶ್ರಮದ ಸಂದೀಪ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಿ ರಾಠೋಡ, ಎನ್ಎಸ್ಎಸ್ ಸಂಯೋಜಕ ಸಾಹೇಬಗೌಡ ಆರ್. ಪಾಟೀಲ, ಅನಿಲ ಭರತೆ, ಸಿದ್ಧರಾಮ ಪಾಟೀಲ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !