ಎನ್‌ಎಸ್‌ಯುಐ 'ಭವಿಷ್ಯದ ಭಾರತ' ಕಾರ್ಯಕ್ರಮ

7

ಎನ್‌ಎಸ್‌ಯುಐ 'ಭವಿಷ್ಯದ ಭಾರತ' ಕಾರ್ಯಕ್ರಮ

Published:
Updated:

ಬೆಂಗಳೂರು: ‘ಸರ್ವಾಧಿಕಾರದ ಆಡಳಿತವನ್ನು ದೇಶದಲ್ಲಿ ಕಿತ್ತೊಗೆಯಬೇಕಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆಯಲ್ಲಿ ನೀವು ಸಮರ್ಥವಾಗಿ ತೊಡಗಿಸಿಕೊಳ್ಳಬೇಕು’ ಎಂದು ಎನ್‌ಎಸ್‌ಯುಐ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಭವಿಷ್ಯದ ಭಾರತ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವ್ಯಾವ ಯೋಜನೆಗಳನ್ನು ರೂಪಿಸಬಹುದು, ವಿದ್ಯಾರ್ಥಿಗಳು ಏನನ್ನು ಅಪೇಕ್ಷಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆಯಂತೆ ಎನ್‌ಎಸ್‌ಯುಐ ಈ ಕಾರ್ಯಕ್ರಮ ಆಯೋಜಿಸಿದೆ.

ರಾಜ್ಯದ 500ಕ್ಕೂ ಹೆಚ್ಚು ಕಾಲೇಜುಗಳಲ್ಲಿ 'ಭವಿಷ್ಯದ ಭಾರತ' ಹೆಸರಿನಡಿ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಲು ಎನ್‌ಎಸ್‌ಯುಐ ಉದ್ದೇಶಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !