ನ್ಯೂಯಾರ್ಕ್‌ ಟೈಮ್ಸ್‌, ವಾಲ್‌ಸ್ಟ್ರೀಟ್ ‌ಜರ್ನಲ್‌ಗೆ ಪುಲಿಟ್ಜರ್ ಪ್ರಶಸ್ತಿ

ಭಾನುವಾರ, ಏಪ್ರಿಲ್ 21, 2019
26 °C

ನ್ಯೂಯಾರ್ಕ್‌ ಟೈಮ್ಸ್‌, ವಾಲ್‌ಸ್ಟ್ರೀಟ್ ‌ಜರ್ನಲ್‌ಗೆ ಪುಲಿಟ್ಜರ್ ಪ್ರಶಸ್ತಿ

Published:
Updated:
Prajavani

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬದ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಸಿದ್ದ ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಹಾಗೂ ‘ದಿ ವಾಲ್‌ಸ್ಟ್ರೀಟ್ ಜರ್ನಲ್‌’ಗೆ ಈ ಬಾರಿಯ ಪುಲಿಟ್ಜರ್ ಪ್ರಶಸ್ತಿ (ಪತ್ರಿಕೋದ್ಯಮ ವಿಭಾಗ) ದೊರಕಿದೆ. 

‘ಟ್ರಂಪ್ ಕುಟುಂಬದ ಹಣಕಾಸು ವ್ಯವಹಾರ ಕುರಿತು ವಿವರಣಾತ್ಮಕವಾದ ತನಿಖಾ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಈ ‍ಪ್ರಶಸ್ತಿ ನೀಡಲಾಗಿದೆ’ ಎಂದು ಪುಲಿಟ್ಜರ್ ಪ್ರಶಸ್ತಿ ಮಂಡಳಿ ತಿಳಿಸಿದೆ. ‌

ಟ‌್ರಂಪ್ ಅವರ ಸ್ವಯಂ ಗಳಿಕೆಯ ಆಸ್ತಿ ವಿವರಗಳು ಹಾಗೂ ಅವರ ಒಡೆತನದ ಉದ್ದಿಮೆಗಳು ಸಾಕಷ್ಟು ತೆರಿಗೆ ವಂಚನೆ ಮಾಡಿರುವ ವಿಷಯವನ್ನು ವರದಿ ಬಯಲಿಗೆಳೆದಿತ್ತು. 2016ರಲ್ಲಿ ತಮ್ಮ ಅಧ್ಯಕ್ಷೀಯ ಚುನಾವಣೆ ವೇಳೆ ಇಬ್ಬರು ಮಹಿಳೆಯರಿಗೆ ಗೋಪ್ಯವಾಗಿ ಹಣ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಪತ್ರಿಕೆ ಕುರಿತು ಪ್ರಶಂಸೆ ವ್ಯಕ್ತವಾಗಿತ್ತು. 

ಯೆಮೆನ್‌ನ ಯುದ್ಧ ಕುರಿತು ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ‘ದಿ ಅಸೋಸಿಯೇಟೆಡ್ ಪ್ರೆಸ್’, ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧದ ದೌರ್ಜನ್ಯಗಳನ್ನು ವರದಿ ಮಾಡಿದ್ದಕ್ಕಾಗಿ ‘ರಾಯಿಟರ್ಸ್‌’ ಅಂತರರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿ ಪ್ರಶಸ್ತಿ ಗಳಿಸಿವೆ. 

ಫಾರೆಸ್ಟ್ ಗ್ಯಾಂಡರ್ ಅವರ ‘ಬಿ ವಿತ್’ ಕೃತಿ ಕವನ ವಿಭಾಗದಲ್ಲಿ, ಡೇವಿಡ್ ಬ್ಲೈಟ್ ಅವರ ‘ಫ್ರೆಡರಿಕ್ ಡಗ್ಲಾಸ್: ಪ್ರಾಫೆಟ್ ಆಫ್ ಫ್ರೀಡಂ’ಗೆ ಇತಿಹಾಸ ವಿಭಾಗದಲ್ಲಿ, ಜೆಫ್ರಿ ಸ್ಟಿವಾರ್ಟ್‌ ಅವರ ‘ದಿ ನ್ಯೂ ನಿಗ್ರೊ: ದಿ ಲೈಫ್ ಆಫ್ ಏಷಿಯನ್ ಲಾಕ್’ಗೆ ಜೀವನ ಚರಿತ್ರೆ ವಿಭಾಗದಲ್ಲಿ ಪ್ರಶಸ್ತಿ ದೊರಕಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !