ಸೋಮವಾರ, ಏಪ್ರಿಲ್ 19, 2021
32 °C

ಸಾಂತಾಕ್ಲಾಸ್‌ ವೇಷದಲ್ಲಿ ಒಬಾಮ: ಮಕ್ಕಳಿಗೆ ಕೊಡುಗೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಸಾಂತಾ ಕ್ಲಾಸ್‌ ಟೋಪಿ, ಭುಜದ ಮೇಲೆ ಇಳಿಬಿಟ್ಟ ನುಣುಪಾದ ಬಟ್ಟೆ ಧರಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಇಲ್ಲಿನ ರಾಷ್ಟ್ರೀಯ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯಕ್ಕೆ ಒಳಗಾಗಿರುವ ಮಕ್ಕಳೊಂದಿಗೆ ಕಾಲ ಕಳೆದರು. ಅಲ್ಲದೆ ಅವರಿಗೆ ಕೊಡುಗೆಗಳನ್ನು ನೀಡಿ ಸಂಭ್ರಮಿಸಿದರು.

ಮೊದಲಿಗೆ ಆಸ್ಪತ್ರೆಯ ಆಟದ ಕೊಠಡಿಗೆ ಭೇಟಿ ನೀಡಿದ ಒಬಾಮ, ಆಟಿಕೆ ತಯಾರಿಸುತ್ತಿದ್ದ ನಾಲ್ವರು ಮಕ್ಕಳೊಂದಿಗೆ ಹರಟಿದರು ಎಂದು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

‘ಎಲ್ಲ ಮಕ್ಕಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಒಬಾಮ ಹೇಳಿದ್ದಾಗಿ ಆಡಳಿತ ಮಂಡಳಿ ಟ್ವೀಟ್‌ ಮಾಡಿದೆ.

‘ಇವರು ಅದ್ಭುತ ಮಕ್ಕಳು. ಅವರ ಕುಟುಂಬದವರೊಂದಿಗೆ ಮಾತನಾಡಲು ನಾವು ಅವಕಾಶ ನೀಡಬೇಕು’ ಎಂದೂ ಒಬಾಮ ಹೇಳಿದ್ದನ್ನು ಆಸ್ಪತ್ರೆ ಟ್ವೀಟ್ ಮಾಡಿದ್ದು, ಇದಕ್ಕೆ 2.40 ಲಕ್ಷ ಜನರು ಲೈಕ್ ಮಾಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು