ವೈಟ್‌ ಟ್ಯಾಪಿಂಗ್ ಕಾಮಗಾರಿ ಸ್ಥಗಿತ ಕೋರಿದ ಅರ್ಜಿ: ನೋಟಿಸ್‌

ಮಂಗಳವಾರ, ಏಪ್ರಿಲ್ 23, 2019
25 °C

ವೈಟ್‌ ಟ್ಯಾಪಿಂಗ್ ಕಾಮಗಾರಿ ಸ್ಥಗಿತ ಕೋರಿದ ಅರ್ಜಿ: ನೋಟಿಸ್‌

Published:
Updated:

ಬೆಂಗಳೂರು: ‘ನಗರದ ಸೌತ್ ಎಂಡ್ ರಸ್ತೆಯಿಂದ ನೆಟ್ಟಕಲ್ಲಪ್ಪ ಸರ್ಕಲ್‌ವರೆಗಿನ ವೈಟ್ ಟ್ಯಾಪಿಂಗ್ (ಕಾಂಕ್ರೀಟ್‌) ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಜಯನಗರ ಮೂರನೇ ಬ್ಲಾಕ್‌ನ ಎ.ಸಿ.ಚಂದ್ರಶೇಖರ್ ರಾಜು ಸೇರಿದಂತೆ ಎಂಟು ಜನರು ಸಲ್ಲಿಸಿರುವ ಈ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಆಕ್ಷೇಪಣೆ ಏನು?: ‘ಸೌತ್‌ಎಂಡ್ ರಸ್ತೆಯಿಂದ ಮಾಧವನ್ ಪಾರ್ಕ್ ಮೂಲಕ ಹಾದುಹೋಗುವ ನಾಗಸಂದ್ರ ಸರ್ಕಲ್‌ನಿಂದ ನೆಟ್ಟಕಲ್ಲಪ್ಪ ವೃತ್ತದವರೆಗೆ ಕೈಗೊಂಡಿರುವ ವೈಟ್ ಟ್ಯಾಪಿಂಗ್ ಕಾಮಗಾರಿ ಅವೈಜ್ಞಾನಿಕ ವಿಧಾನದಿಂದ ಕೂಡಿದೆ. ಇಲ್ಲಿನ ರಸ್ತೆಗಳು ವಿಶಾಲವಾಗಿವೆ. ಇಲ್ಲಿ ವಾಹನ ಸಂಚಾರ ದಟ್ಟಣೆ ಇಲ್ಲ. ಹೀಗಾಗಿ ವೈಟ್‌ ಟ್ಯಾಪಿಂಗ್‌ ಅಗತ್ಯವಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

‘ಇಲ್ಲಿನ ರಸ್ತೆಗಳು ಮೊದಲೇ ಎತ್ತರದಲ್ಲಿವೆ, ಈಗ ವೈಟ್ ಟ್ಯಾಪಿಂಗ್‌ನಿಂದ ಅವುಗಳ ಎತ್ತರ ಇನ್ನಷ್ಟು ಹೆಚ್ಚಾಗುತ್ತಿದೆ. ಆದ್ದರಿಂದ ಈ ರಸ್ತೆಗಳ ಕಾಮಗಾರಿ ಸ್ಥಗಿತಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು’ ಎಂಬುದು ಅರ್ಜಿದಾರರು ಮನವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !