ಜನಸಂಪರ್ಕ ಸಭೆ ಮುಂದೂಡಿಕೆ

7

ಜನಸಂಪರ್ಕ ಸಭೆ ಮುಂದೂಡಿಕೆ

Published:
Updated:
Deccan Herald

ಕೊಳ್ಳೇಗಾಲ: ನಗರದ ಸೆಸ್ಕ್‌ ಇಲಾಖೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಸಾರ್ವಜನಿರಕು ಬಂದ ಹಿನ್ನೆಲೆ ಹಿರಿಯ ಅಧಿಕಾರಿಗಳು ಸಭೆಯನ್ನು ಮುಂದೂಡಿದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಹಿರಿಯ ನಾಗಕರಾದ ನಾಗಣ್ಣ, ‘ಇಂದಿನ ಸಭೆಯಲ್ಲಿ ಹತ್ತಾರು ಮಂದಿ ವಿದ್ಯುತ್ ಗುತ್ತಿಗೆದಾರರು, ನಿಮ್ಮ ಇಲಾಖೆಯ ಸಿಬ್ಬಂದಿಗಳು ಇದ್ದಾರೆ. ಐದಾರು ಮಂದಿ ಮಾತ್ರ ನಾಗರಿಕರು ಹಾಜರಿದ್ದಾರೆ, ಸಭೆ ನಡೆಯುವ ಮುನ್ನ ಪ್ರಚಾರ ಮಾಡಿಲ್ಲ. ಕರಪತ್ರ ಹಂಚಿಲ್ಲ, ಅಹವಾಲು ಸಲ್ಲಿಸಲು ನಮ್ಮ ಬಳಿ ಸಾಕಷ್ಟು ಸಮಸ್ಯೆಗಳಿವೆ. ಆದರೆ, ಈ ಸಭೆಗೆ ಬೆರಳಣೆಕೆ ಮಂದಿ ಮಾತ್ರ ಹಾಜರಿರುವ ಹಿನ್ನೆಲೆಯಲ್ಲಿ ಸಭೆ ಮುಂದೂಡಿ. ಸಭೆ ನಡೆಸಿದರೆ ಇದು ನಾಮಕಾವಸ್ಥೆ ಸಭೆಯಾಗಲಿದೆ’ ಎಂದು ಆಗ್ರಹಿಸಿದರು.

ಇಲ್ಲಿನ ಅಧಿಕಾರಿಗಳು ಜನಪರ ಇಲ್ಲದ ಕಾರಣ ಹಾಗೂ ಸಮರ್ಪಕ ರೀತಿ ಜನರಿಗೆ ವಿಚಾರ ಮುಟ್ಟಿಸದೆ ಇರುವುದರಿಂದ ಸಭೆ ಮುಂದೂಡಿ. ಜನರನ್ನು ಸೇರಿಸಿ ಅವರ ಅಹವಾಲು ಸ್ವೀಕರಿಸಿ. ಅವರ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದರು.

ದಲಿತ ಮುಖಂಡ ಭೀಮನಗರ ಕೃಷ್ಣರಾಜು ಮಾತನಾಡಿ, ‘ಹರಳೆ ಸಮೀಪದ ಜಂಭುಲಿಂಗ ಟ್ರಾನ್ಸ್‌ಫಾರ್ಮರನ್ನು ತೆರವು ಮಾಡಿ. ಇದರಿಂದ ವಿದ್ಯುತ್ ಪೋಲಾಗುವುದು ನಿಲ್ಲುತ್ತದೆ ಇಲ್ಲವೆ ಕೂಡಲೇ ಕಡಿತ ಮಾಡಿ’ ಎಂದು ಆಗ್ರಹಿಸಿದರು.

ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕಡಿವಾಣ ಹಾಕಿ ಎಂಬ ದೂರಿಗೆ ಮೈಸೂರಿನ ಮುಖ್ಯ ಎಂಜಿನಿಯರ್ ಉಮೇಶ್ ಮಾತನಾಡಿ, ‘ನಾನು ಈ ಭಾಗಕ್ಕೆ ವರ್ಗಾವಣೆಯಾಗಿ ಬಂದು ಕೇವಲ 20 ದಿನಗಳಷ್ಟೆ ಆಗಿದೆ. ಮುಂದೆ ಜನರನ್ನು ಸೇರಿಸುವ ಹಾಗೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗುವುದು. ಇಂದಿನ ಸಭೆಯನ್ನು ಮುಂದೂಡಲಾಗುವುದು’ ಎಂದು ತಿಳಿಸಿದರು.

ಚಾಮರಾಜನಗರ ಎಂಜಿನಿಯರ್ ತಾರಾ, ಕೊಳ್ಳೇಗಾಲ ಮುಖ್ಯ ಎಂಜಿನಿಯರ್ ಪ್ರದೀಪ್, ಕಿರಿಯ ಎಂಜಿನಿಯರ್ ಪ್ರದೀಪ್, ಸತೀಶ್ ಬಾಬ, ಜಮೀಲ ಸುಧಾಕರ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !