ನಿರ್ಬಂಧ: ತೈಲ ಮಾರುಕಟ್ಟೆ ಏರುಪೇರು

7

ನಿರ್ಬಂಧ: ತೈಲ ಮಾರುಕಟ್ಟೆ ಏರುಪೇರು

Published:
Updated:

ಲಂಡನ್‌: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಅಮೆರಿಕ ಹಾಕಿರುವ ಬೆದರಿಕೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯ ಸಮತೋಲನಕ್ಕೆ ಧಕ್ಕೆ ಒದಗುವ ಅಪಾಯ ಎದುರಾಗಿದೆ.

ಅಮೆರಿಕದ ಆರ್ಥಿಕ ದಿಗ್ಬಂಧನ ಜಾರಿಗೆ ಬರುತ್ತಿದ್ದಂತೆ ತೈಲ ಉತ್ಪಾದನೆಯು ಎಷ್ಟು ಬೇಗ ಕಡಿಮೆ
ಯಾಗಲಿದೆ ಎನ್ನುವುದನ್ನು ಆಧರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಲಿದೆ.

ಅಮೆರಿಕದ ಕ್ರಮವು, ‘ಒಪೆಕ್‌’ ಸಂಘಟನೆಯ ಮೂರನೇ ಅತಿದೊಡ್ಡ ಸದಸ್ಯ ದೇಶವಾಗಿರುವ ಇರಾನಿನ ಆರ್ಥಿಕತೆಗೆ ತೀವ್ರ ಧಕ್ಕೆ ಒಡ್ಡಲಿದೆ. ಜತೆಗೆ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಸಮತೋಲನವನ್ನೂ ಏರುಪೇರು ಮಾಡಲಿದೆ ಎಂದು ತೈಲ ಮಾರುಕಟ್ಟೆಯ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !