ಮೊನ್ನೆ ಮೊನ್ನೆಯವರೆಗೂ ನಮಗೆ ಒಂದು ‘ವಾಕ್ಮನ್’ ಎಂಬ ಅಂಗೈಗಿಂತ ಸ್ವಲ್ಪ ದೊಡ್ಡ ಸಾಧನವೊಂದಕ್ಕೆ ಮಾರುದ್ದ ‘ಕೇಬಲ್’ ಅನ್ನು ಸುತ್ತುಕೊಂಡು ಕಿಸೆಯಲ್ಲಿಟ್ಟುಕೊಂಡು, ಬೇಕಾದಾಗ ಅದರ ಕೇಬಲ್ ಅನ್ನು ಕಿವಿಗೆ ಸಿಕ್ಕಿಸಿಕೊಂಡು ಸಂಗೀತ ಕೇಳಿಸಿಕೊಳ್ಳುತ್ತಿದ್ದ ಕಾಲ ನೆನಪಿದೆ. ಈಗ ಮಾರ್ಕೆಟ್ನಲ್ಲಿ ಯಥೇಚ್ಛವಾಗಿ ಸಿಗುವ ‘ಟಿಡಬ್ಲ್ಯೂಎಸ್ ಇಯರ್ಬಡ್’ಗಳನ್ನು ಕಿವಿಯಲ್ಲಿಟ್ಟುಕೊಂಡು ಕೇಳಿಸಿಕೊಳ್ಳುವಾಗ ಅದು ಯಾವುದೋ ಓಬಿರಾಯನ ಕಾಲ ಎನ್ನಿಸೀತು!

ನಮ್ಮ ಕಿವಿಗೂ ಎಲೆಕ್ಟ್ರಾನಿಕ್ ಡಿವೈಸ್ಗೂ ಸಂಬಂಧ ಕಲ್ಪಿಸುತ್ತಿದ್ದ 3.5 ಎಂಎಂ ಜಾಕ್ ಅನ್ನು ನಾಪತ್ತೆ ಮಾಡಿದ ತಂತ್ರಜ್ಞಾನಕ್ರಾಂತಿಯೇ ಈಗ ಇಡೀ ಆಡಿಯೊ ಸಾಧನವನ್ನೇ ಕಾಣೆಯಾಗಿಸುವ ಹಂತಕ್ಕೆ ಬೆಳೆದು ನಿಂತಿದೆ. ವೈರ್ಲೆಸ್ ಆಡಿಯೊ ಜನಪ್ರಿಯವಾಗುತ್ತಿದ್ದ ಹಾಗೆಯೇ 3.5 ಎಂಎಂ ಜಾಕ್ ನೇಪಥ್ಯಕ್ಕೆ ಸರಿಯುತ್ತ ಸಾಗಿತು. ಈಗ ಬಹುಶಃ ಯಾರ ಬಳಿಯೂ ಈ 3.5 ಎಂಎಂ ಜಾಕ್ ಇರುವ ಇಯರ್ಫೋನ್ಗಳು ಹುಡುಕಿದರೂ ಸಿಗದಿರಬಹುದು!

ಈ ಶ್ರವಣಪಯಣಕ್ಕೆ 40-50 ವರ್ಷಗಳ ಇತಿಹಾಸವಿದೆ. 1979ರಲ್ಲಿ ಮಾರುಕಟ್ಟೆಗೆ ಬಂದ ‘ಸೋನಿ ವಾಕ್ಮನ್’ ಬಹುಶಃ ಶ್ರವಣಕ್ರಾಂತಿಯ ಆರಂಭದ ಹೆಜ್ಜೆ ಎಂದೇ ಹೇಳಬಹುದು. ಅಲ್ಲಿಯವರೆಗೂ ಸಂಗೀತ ಎಂಬುದು ಖಾಸಗಿ ಸಂಗತಿಯಾಗಿರಲಿಲ್ಲ; ಸುಮ್ಮನೆ ಮನೆಯ ಮೂಲೆಯಲ್ಲಿ ಕುಳಿತು ನಮ್ಮಷ್ಟಕ್ಕೆ ನಾವು ಸಂಗೀತ ಕೇಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ಸೋನಿ ವಾಕ್ಮನ್ ಈ ಅನುಕೂಲವನ್ನು ಕಲ್ಪಿಸಿ, ಅಪಾರ ಯಶಸ್ಸನ್ನು ಸಾಧಿಸಿತು. ಆದರೆ, ನಾವು ಈ ಕೇಬಲ್ಗಳ ಸಂಗ ತೊರೆದಿರಲಿಲ್ಲ. 3.5 ಜಾಕ್ ಕರುಳಬಳ್ಳಿಯ ಹಾಗೆ ಎಲೆಕ್ಟ್ರಾನಿಕ್ ಸಾಧನಕ್ಕೂ ನಮ್ಮ ಶ್ರವಣದಾಹಕ್ಕೂ ಒಂದು ಕೊಂಡಿಯ ಹಾಗೆ ಕೆಲಸ ಮಾಡುತ್ತಿತ್ತು. ಈ ತಂತಿಯ ಸಂಬಂಧ 2016ರವರೆಗೂ ಮುಂದುವರಿಯಿತು. ಅದರ ರೂಪ, ಗಾತ್ರ, ಆಕಾರ ಬದಲಾಗಿರ ಬಹುದು. ವಾಕ್ಮನ್ಗಳು ಹೋಗಿ, ಇಯರ್ಫೋನ್ಗಳು ಬಂದವು. ಮೊಬೈಲ್ ಡಿವೈಸ್ಗೆ 3.5 ಎಂಎಂ ಜಾಕ್ಗಳನ್ನು ಸಿಕ್ಕಿಸಿಕೊಂಡು ರೇಡಿಯೊವನ್ನೋ ಸಂಗೀತವನ್ನೋ ಕೇಳುವುದಕ್ಕೆ ಅನುಕೂಲವಾಯಿತು.

ಆದರೆ, 2016ರಲ್ಲಿ ಮಹತ್ವದ ಬದಲಾವಣೆಯಾಯಿತು. ಅದು ‘ವೈರ್ಲೆಸ್’ ಅಥವಾ ‘ಬ್ಲ್ಯೂಟೂತ್’ ಎಂಬುದು ಅಲ್ಲಿಯವರೆಗೆ ಲಕ್ಷುರಿಯಾಗಿದ್ದುದು, ನಿಧಾನವಾಗಿ ಸಾಮಾನ್ಯ ಎಂಬಂತಾಯಿತು. ಈ 3.5 ಎಂಎಂ ಜಾಕ್ ಎಂಬುದು ಸ್ಮಾರ್ಟ್ಫೋನ್ನಿಂದ ಕಣ್ಮರೆ ಆಗುವುದಕ್ಕೆ ಶುರುವಾಯಿತು. 2025ರ ಹೊತ್ತಿಗೆ 15 ಕೋಟಿಗಿಂತಲೂ ಹೆಚ್ಚು ಇಯರ್ಬಡ್ಗಳು ಮಾರಾಟವಾಗಿವೆ ಎಂಬುದನ್ನು ನೋಡಿದರೆ, ಈ ‘ಟ್ರ್ಯೂ ವೈರ್ಲೆಸ್ ಸ್ಟೀರಿಯೋ’ ಮಾರುಕಟ್ಟೆ ಯಾವ ಪರಿ ಬೆಳೆದು ನಿಂತಿದೆ ಎಂಬುದನ್ನು ನಾವು ಅರಿಯಬಹುದು.

ಈ ಜಗತ್ತಿನ ಎಲ್ಲ ಜಂಜಡಗಳಿಗೂ ಕಿವುಡರಾಗಿರುವುದಕ್ಕೇ ನಾವು ದುಡ್ಡು ಕೊಟ್ಟಿದ್ದೆವು! ‘ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್’ ಎಂಬುದು ಟೆಕ್ ಕಂಪನಿಗಳಿಗೆ ಈಗಲೂ ಅತಿದೊಡ್ಡ ಸೆಲ್ಲಿಂಗ್ ಪಾಯಿಂಟ್! ಟ್ರಾಫಿಕ್ ಗದ್ದಲ ಕೇಳಿಸದ, ಪಕ್ಕದಲ್ಲೇ ಹೈ ಡೆಸಿಬಲ್ನಲ್ಲಿ ವಾಹನವೊಂದು ಹಾರ್ನ್ ಮಾಡುತ್ತಿದ್ದರೂ ಅದು ನಮ್ಮ ಕಿವಿಯ ತಮಟೆಯವರೆಗೂ ತಲುಪದಂತೆ ತಡೆದು, ಬರಿ ನಮಗೆ ಬೇಕಾದ ಸಂಗೀತವನ್ನಷ್ಟೇ ಕೇಳಿಸುವಂತೆ ಮಾಡುವ ಎಎನ್ಸಿ ಈಗಿನ ಸದ್ಯದ ಜನಪ್ರಿಯ ಟ್ರೆಂಡ್! ಆದರೆ, ನಿಧಾನಕ್ಕೆ ಜನರು ಮತ್ತೆ ಜಗತ್ತಿನ ಜಂಜಡಗಳಿಗೆ ಕಿವಿ ಒಡ್ಡುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು! ಈಗ ಓಪನ್ ಇಯರ್ ಶ್ರವಣಸಾಧನಗಳು ಮುನ್ನೆಲೆಗೆ ಬರುತ್ತಿವೆ. ಮಾರುಕಟ್ಟೆಯಲ್ಲಿ ಈಗ ಎಎನ್ಸಿ ಕ್ರೇಜ್ ಕಡಿಮೆಯಾಗುತ್ತಿದೆ. ಈ ಓಪನ್ ಏರ್ ಇಯರ್ಬಡ್ಗಳ ಬಗ್ಗೆ ಒಲವು ಹೆಚ್ಚುತ್ತಿದೆ. ಕಚೇರಿಯಲ್ಲೋ ಮನೆಯಲ್ಲೋ ಮೀಟಿಂಗ್ನಲ್ಲಿ ಕುಳಿತ ಮನುಷ್ಯನಿಗೆ ಪಕ್ಕದಲ್ಲಿ ಕುಳಿತ ಸಹೋದ್ಯೋಗಿಯ ಮಾತುಗಳನ್ನೋ, ಮನೆಯಲ್ಲಿರುವ ಮಕ್ಕಳ ಮಾತನ್ನೋ ಕೇಳಿಸಿಕೊಳ್ಳುವ ಅಗತ್ಯ ಇರುತ್ತದೆ. ಆಗ ಈ ಎಎನ್ಸಿ ಪ್ರಯೋಜನಕ್ಕೆ ಬರದು. ಹೀಗಾಗಿ, ಓಪನ್ ಇಯರ್ ತಂತ್ರಜ್ಞಾನ ಪ್ರಚಲಿತಕ್ಕೆ ಬಂದಿದೆ. ಇವು ನಮ್ಮ ಕಿವಿಯ ತಮಟೆಯ ಬಳಿಯೇ ಧ್ವನಿಯನ್ನು ಬಿತ್ತರಿಸುವುದರ ಬದಲಿಗೆ 1-2 ಸೆಂ.ಮೀ. ದೂರದಲ್ಲಿ ಧ್ವನಿಯನ್ನು ಬೀಳಿಸುತ್ತವೆ. ಇದರಿಂದ ನಮ್ಮ ಸುತ್ತ ಏನು ನಡೆಯುತ್ತಿದೆಯೋ ಅದರ ಧ್ವನಿಯೂ ಕೇಳಿಸುತ್ತಲೇ ಇರುತ್ತದೆ. ಇದರ ಜೊತೆಗೆ, ‘ಬೋನ್ ಕಂಡಕ್ಷನ್’ ತಂತ್ರಜ್ಞಾನ ಕೂಡ ಆಸಕ್ತಿಯನ್ನು ಕೆರಳಿಸುತ್ತಿದೆ. ಆರಂಭದಲ್ಲಿ ಕೇವಲ ಈಜುವವರು, ಸೈಕ್ಲಿಸ್ಟ್ಗಳು ಹಾಗೂ ರನ್ ಮಾಡುವವರು ಇತ್ಯಾದಿ ಕ್ರೀಡಾಪಟುಗಳಿಗಷ್ಟೇ ಸೂಕ್ತ ಎಂಬಂತಿದ್ದ ಬೋನ್ ಕಂಡಕ್ಷನ್ ನಿಧಾನವಾಗಿ ಇತರರಿಗೂ ಸೂಕ್ತವಾಗುವಂತೆ ಬದಲಾಗುತ್ತಿದೆ. ಬೇಸ್ಗೆ ಮೂಳೆಯ ಕಂಪನಗಳು ಹಾಗೂ ಟ್ವೀಟರ್ಗಳಿಗೆ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ ಗಳನ್ನು ಬಳಸುವ ಇವು ಹೊಸ ಕಾಲದ ಫ್ಯಾಷನ್ ಆಗುವ ಕಡೆಗೆ ಒಂದೊಂದೇ ಹೆಜ್ಜೆ ಮುಂದಿಡುತ್ತಿವೆ.

ನಾವು ಈಗ ಬಳಸುತ್ತಿರುವ ಧ್ವನಿ ಉತ್ಪಾದನೆ ತಂತ್ರಜ್ಞಾನವಿದೆಯಲ್ಲ. ಅಂದರೆ, ತಾಮ್ರದ ತಂತಿಗಳ ಸುರುಳಿ ಹಾಗೂ ಅಯಸ್ಕಾಂತ ವನ್ನು ಬಳಸಿ ಧ್ವನಿ ಉತ್ಪಾದನೆ ಮಾಡುವ ಅತ್ಯಂತ ಪುರಾತನ ತಂತ್ರಜ್ಞಾನವೂ 3.5 ಎಂಎಂ ಜಾಕ್ ಹಿಡಿದ ದಾರಿಯನ್ನೇ ತುಳಿಯುವ ದಿನ ದೂರವಿದ್ದಂತಿಲ್ಲ. ಎಂಇಎಂಎಸ್ ಡ್ರೈವರ್ಗಳು ಸದ್ಯ ಶ್ರವಣಸಾಧನ ಪ್ರಿಯರ ಹೊಸ ಟ್ರೆಂಡ್. ಸದ್ಯ ಇದು ಸಾಮಾನ್ಯ ಜನರ ಕೈಗೆಟಕುವ ಮಟ್ಟದಲ್ಲಿಲ್ಲ. ಆದರೆ, ಸಾಂಪ್ರದಾಯಿಕ ವಿಧಾನಕ್ಕಿಂತ 150 ಪಟ್ಟು ವೇಗದ, 10 ಪಟ್ಟು ಹೆಚ್ಚು ನಿಖರವಾದ ಧ್ವನಿಯನ್ನು ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಈ ಹೊಸ ತಂತ್ರಜ್ಞಾನ ಎಷ್ಟು ನಿಖರ ಎಂದರೆ, 1990ರ ಕಾಲದಲ್ಲಿ ಸ್ಟುಡಿಯೋದಲ್ಲಿ ಬಳಕೆಯಾಗುತ್ತಿದ್ದ ಉನ್ನತ ದರ್ಜೆಯ ಸ್ಪೀಕರ್ಗಳಷ್ಟೇ ಗುಣಮಟ್ಟದ ಧ್ವನಿಯನ್ನು ನಮ್ಮ ಕಿವಿಗೇ ತಂದು ತಲುಪಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಅದೂ ಅಲ್ಲದೇ, ಈ ತಂತಿಗಳ ಸುರುಳಿ ಹಾಗೂ ಅಯಸ್ಕಾಂತದ ತಂತ್ರಜ್ಞಾನದಲ್ಲಿ ಇದ್ದ ಗಾತ್ರದ ಮಿತಿಯನ್ನು ಮೀರಿ, ಇವು ಅತಿ ಸಣ್ಣ ಸಾಧನವಾಗಿ ನಮ್ಮ ಕಿವಿಯನ್ನು ತಲುಪಲ್ಲದು. ನಮ್ಮ ಕಿವಿಯಲ್ಲೋ, ಕಿವಿಯ ಬಳಿಯೋ ಇತರಿರಗೆ ಕಾಣಿಸದಷ್ಟು ಅತಿ ಸಣ್ಣ ರೂಪದಲ್ಲಿ ಇದ್ದುಕೊಂಡೂ ಇಡೀ ಬ್ರಹ್ಮಾಂಡದ ಧ್ವನಿಯನ್ನೇ ನಮಗೆ ಕೇಳಿಸಬಲ್ಲ ಅದ್ಭುತ ಇದರಲ್ಲಿದೆ. ಈ ತಂತ್ರಜ್ಞಾನಕ್ಕೆ 2026 ಸಿಇಎಸ್ ಇನ್ನೋವೇಷನ್ ಪುರಸ್ಕಾರ ಕೂಡ ಸಿಕ್ಕಿದೆ. ಇದು ನಮ್ಮ ಕಿವಿಯನ್ನು ತಲುಪುವುದಕ್ಕೆ ಇನ್ನೊಂದು 10 ವರ್ಷಗಳು ಬೇಕಾಗಬಹುದು.

ಇನ್ನು, ‘ಔರಾಕಾಸ್ಟ್’ ಎಂಬ ತಂತ್ರಜ್ಞಾನ ಈಗಾಗಲೇ ನಮ್ಮ ಕಿವಿಯಲ್ಲೇ ಇದ್ದರೂ, ಅದು ಇನ್ನೂ ಅಷ್ಟು ಜನಪ್ರಿಯವಾಗಲಿಲ್ಲ. ಈ ಔರಾಕಾಸ್ಟ್ ಕೆಲಸ ಮಾಡುವ ಪರಿಯೇ ಅದ್ಭುತ! ಇದು ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಇಡೀ ಜಗತ್ತೇ ಮೌನ ತಾಳಿಬಿಡಬಹುದು! ಉದಾಹರಣೆಗೆ, ನಾವು ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ, ಅಲ್ಲಿಯ ಗೋಡೆಯ ಮೇಲೆ ಅಳವಡಿಸಿದ ಟಿ.ವಿ. ಮ್ಯೂಟ್ ಆಗಿರುತ್ತದೆ. ಆದರೆ, ನಾವು ನಮ್ಮ ಕಿವಿಗೆ ತಗುಲಿಸಿಕೊಂಡ ಇಯರ್ಬಡ್ನಲ್ಲಿ ಆ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಧ್ವನಿ ಕೇಳುತ್ತದೆ. ಬೇಕಾದರೆ, ಜಿಮ್ ಟ್ರೇನರ್ ಮೈಕ್ ಹಿಡಿದುಕೊಂಡು ಮಾತನಾಡುತ್ತಿದ್ದಾಗ ಆತನ ಧ್ವನಿಯನ್ನೂ ಕೇಳಿಸಿಕೊಳ್ಳುವ ಹಾಗೆ ಟ್ಯೂನ್ ಮಾಡಿಕೊಳ್ಳಬಹುದು. ಹಿಂದೆ ರೇಡಿಯೊದಲ್ಲಿನ ಒಂದು ಡಯಲ್ ತಿರುಗಿಸಿ ಬೇರೆ ರೇಡಿಯೊ ಸ್ಟೇಷನ್ ಕೇಳಿಸಿಕೊಳ್ಳುತ್ತಿದ್ದೆವಲ್ಲ, ಅದೇ ರೀತಿ! ಯಾವುದೂ ಬೇಡ ಎಂದು, ಇಯರ್ಬಡ್ ಅನ್ನು ಕಿವಿಯಿಂದ ತೆಗೆದರೆ ಇಡೀ ಜಗತ್ತೇ ನಿಶ್ಶಬ್ದ!

ಅಚ್ಚರಿಯ ಸಂಗತಿಯೆಂದರೆ, ಈ ಬ್ಲ್ಯೂಟೂತ್ ಔರಾಕಾಸ್ಟ್ ಈಗಾಗಲೇ ನಮ್ಮ ಕಿವಿಯಲ್ಲಿದೆ. ಅಂದರೆ, ನಮ್ಮ ಬಳಿ ಇರುವ ಟಿಡಬ್ಲ್ಯೂಎಸ್ ಇಯರ್ಬಡ್ಗಳಲ್ಲಿ ಈಗಾಗಲೇ ಇದೆ. ಆದರೆ, ಶೇ 99ರಷ್ಟು ಸಾಧನಗಳಲ್ಲಿ ಈ ಸೌಲಭ್ಯವನ್ನು ಆಕ್ಟಿವೇಟ್ ಮಾಡಲಿಲ್ಲ.

ಬಹುಶಃ ಎಂಇಎಂಎಸ್ ಎಂಬ ತಂತ್ರಜ್ಞಾನ ನಮ್ಮ ಕೈಗೆಟುಕುವ ಹಂತಕ್ಕೆ ಬಂದ ಮೇಲೆ, ಇನ್ನೊಂದು 10 ವರ್ಷಗಳ ನಂತರ ‘ಹಿಂದೆ, ನಾವೆಲ್ಲ ಸ್ಪೀಕರ್ ಹಾಗೂ ಇಯರ್ ಬಡ್ಗಳಲ್ಲಿ ಸಂಗೀತ ಕೇಳುತ್ತಿದ್ದೆವು...’ ಎಂದು ನೆನಪಿಸಿಕೊಳ್ಳುವ ಸನ್ನಿವೇಶ ಬರಬಹುದು!v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.