ತಮ್ಮಡಹಳ್ಳಿ ಕೆರೆ: ಮತ್ತೊಬ್ಬ ಯುವಕನ ಶವ ಪತ್ತೆ

ಶನಿವಾರ, ಏಪ್ರಿಲ್ 20, 2019
31 °C

ತಮ್ಮಡಹಳ್ಳಿ ಕೆರೆ: ಮತ್ತೊಬ್ಬ ಯುವಕನ ಶವ ಪತ್ತೆ

Published:
Updated:

ಚಾಮರಾಜನಗರ: ತಾಲ್ಲೂಕಿನ ತಮ್ಮಡಹಳ್ಳಿಯ ಗುಂಜಮ್ಮನ ಕೆರೆಯಲ್ಲಿ ಸೋಮವಾರ ಬೆಳಿಗ್ಗೆ ಮತ್ತೊಬ್ಬ ಯುವಕನ ಶವ ಪತ್ತೆಯಾಗಿದೆ.

ಗುಂಡ್ಲುಪೇಟೆ ಪಟ್ಟಣದ ಮನು (20) ಮೃತಪಟ್ಟ ಯುವಕ. ಭಾನುವಾರ ಇದೇ ಕೆರೆಯಲ್ಲಿ ಗುಂಡ್ಲುಪೇಟೆ ಪಟ್ಟಣದ ರವಿ (18) ಪ್ರಸಾದ್ (20) ಎಂಬುವವರ ಶವ ಪತ್ತೆಯಾಗಿತ್ತು. 

ಇವರು ಮೂವರು ಸೇರಿದಂತೆ ಏಳೆಂಟು ಯುವಕರು ಗ್ರಾಮಕ್ಕೆ ಬಂದು ಕೆರೆಗೆ ಈಜಲು ಇಳಿದಿದ್ದರು. ಈ ಸಂದರ್ಭದಲ್ಲಿ ಮೂವರು ಮುಳುಗಿದ್ದರು. ಆರಂಭದಲ್ಲಿ ಇಬ್ಬರು ಮುಳುಗಿದ್ದಾರೆ ಎಂದು ಹೇಳಲಾಗಿತ್ತು. ಭಾನುವಾರ ಸಂಜೆಯವರೆಗೂ ಶವ ಪತ್ತೆಯಾಗಿರಲಿಲ್ಲ. ನಂತರ ಕೆರೆ ನೀರನ್ನು ಅರ್ಧದಷ್ಟು ಖಾಲಿ ಮಾಡಿದಾಗ ಇಬ್ಬರ ಶವ ಪತ್ತೆಯಾಗಿತ್ತು.

ಸೋಮವಾರ ಕೆರೆಯಲ್ಲಿ ಮನುವಿನ ಶವ ತೇಲುತ್ತಿದ್ದುದು ಕಂಡು ಬಂತು. 

ಮನು ಕೂಡ ಭಾನುವಾರ ಮೃತಪಟ್ಟಿದ್ದ ಯುವಕರೊಂದಿಗೆ ಕೆರೆಗೆ ಈಜಲು ಇಳಿದಿದ್ದ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರವಿ ಕಿರಣ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !