ಶುಕ್ರವಾರ, 6–9–1968

7

ಶುಕ್ರವಾರ, 6–9–1968

Published:
Updated:

ವಿಧಾನಸಭೆ ಅಧ್ಯಕ್ಷರಾಗಿ ಕೊಠಾವಳೆ

ಬೆಂಗಳೂರು, ಸೆ. 5– ವಿರೋಧ ಪಕ್ಷಗಳ ಸದಸ್ಯರ ಗೈರುಹಾಜರಿಯಲ್ಲಿ ಅರವತ್ತೊಂದರ ಹರೆಯದ ಹಿರಿಯ ಕಾಂಗ್ರೆಸ್ಸಿಗ ಎಸ್.ಡಿ. ಕೊಠಾವಳೆ ಅವರು ಇಂದು ವಿಧಾನ ಸಭೆಯ ಹೊಸ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದರು.

*

ಪ್ರಾಥಮಿಕ, ಸೆಕೆಂಡರಿ ಶಾಲೆಗಳ ಆಡಳಿತ ಜಿಲ್ಲಾ ಮಂಡಲಿಗೆ

ಬೆಂಗಳೂರು, ಸೆ. 5– ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳ ಆಡಳಿತವನ್ನು ವಿಕೇಂದ್ರೀಕರಣಗೊಳಿಸಿ ಅವುಗಳ ನಿರ್ವಹಣಾಧಿಕಾರವನ್ನು ಜಿಲ್ಲಾ ಶಾಲಾ ಮಂಡಲಿಗಳಿಗೆ ಪೂರ್ತಿಯಾಗಿ ವಹಿಸಿಕೊಡುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

*

ಸಭಾಪತಿಯಾಗಿ ಕೆ.ಕೆ. ಶೆಟ್ಟಿ

ಬೆಂಗಳೂರು, ಸೆ. 5– ಅರವತ್ತೆಂಟು ವರ್ಷ ವಯಸ್ಸಿನ ಹಿರಿಯ ಕಾಂಗ್ರೆಸ್ ಸದಸ್ಯ ಕಾಂತಪ್ಪ ಶೆಟ್ಟರನ್ನು ವಿಧಾನ ಪರಿಷತ್ತಿನ ಸಭಾಪತಿಯನ್ನಾಗಿ ಸಭೆಯು ಬಹುಮತದಿಂದ ಆರಿಸಿತು.

*

ನಗರದಲ್ಲಿ ಸಂಸತ್ ಅಧಿವೇಶನ

ಬೆಂಗಳೂರು, ಸೆ. 5– ದಕ್ಷಿಣದಲ್ಲಿ ಸಂಸತ್ ಅಧಿವೇಶನ ನಡೆಸುವ ಸಂಬಂಧದಲ್ಲಿ ಪರಿಶೀಲನೆ ನಡೆಸಲು ನಗರಕ್ಕೆ ಭೇಟಿ ಕೊಡಲಿರುವ ಸಂಸತ್ ಉಪಸಮಿತಿಯ ಸದಸ್ಯರನ್ನೆಲ್ಲಾ ಸರ್ಕಾರಿ ಅತಿಥಿಗಳನ್ನಾಗಿ ಪರಿಗಣಿಸಲು ನಿರ್ಧರಿಸಲಾಗಿದೆಯೆಂದು ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ಹೇಳಿದರು.

*

ಅಭಾವ ಪ್ರದೇಶಗಳಿಗೆ ಯೋಜನಾ ಆಯೋಗ ನೆರವು ಶೀಘ್ರದಲ್ಲೆ

ಬೆಂಗಳೂರು, ಸೆ. 5– ರಾಜ್ಯದ ವರಿಷ್ಠರೊಡನೆ ಯೋಜನಾ ಆಯೋಗದ ಉಪಾಧ್ಯಕ್ಷ ಡಾ. ಗಾಡ್ಗೀಲ್‌ ಮತ್ತು ಅವರ ಸಹಾಯಕರು ನಡೆಸಿದ ಮಾತುಕತೆ ಪರಿಣಾಮ ಸದ್ಯಕ್ಕೆ ಅಭಾವ ಎದುರಿಸುತ್ತಿರುವ ಪ್ರದೇಶಗಳಿಗೆ ತಕ್ಷಣ ನೆರವು ಒದಗಿಸುವ ಪ್ರಯತ್ನಗಳಿಗೆ ವರವೆನಿಸುವ ನಿರೀಕ್ಷೆಯಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !