ಬುಧವಾರ, 2–2–1994

7
ಬುಧವಾರ

ಬುಧವಾರ, 2–2–1994

Published:
Updated:

ಪಾಕ್ ಹುನ್ನಾರ ಬಯಲಿಗೆ ಯತ್ನ

ಡೇವೋಸ್, ಫೆ. 1 (ಪಿಟಿಐ)– ದಕ್ಷಿಣ ಏಷ್ಯದಲ್ಲಿ ಅಸ್ಥಿರತೆ ಮೂಡಿಸಲು ಪಾಕಿಸ್ತಾನದ ಹೂಟವನ್ನು ಬಯಲಿಗೆಳೆಯುವ ಪ್ರಮುಖ ರಾಜತಾಂತ್ರಿಕ ಪ್ರಯತ್ನವನ್ನು ಇಂದು ಇಲ್ಲಿ ಪ್ರಧಾನಿ ನರಸಿಂಹರಾವ್ ಅವರು ಆರಂಭಿಸಿದರು.

ರಾಷ್ಟ್ರಗಳ ರಾಜಕೀಯ ಸಮಗ್ರತೆ ಹಾಗೂ ಶಾಂತಿಗೆ ಅಪಾಯ ಉಂಟಾಗುತ್ತಿರುವ ಬಗ್ಗೆ ವಿಶ್ವ ಆರ್ಥಿಕ ವೇದಿಕೆಯ ಮಹಾಧಿವೇಶನದ ಸಮಾರೋಪ ಭಾಷಣದಲ್ಲಿ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ನೀಡಿದರು.

ಮಸೀದಿ ಮರುನಿರ್ಮಾಣ ಕೋರಿ ಪ್ರದರ್ಶನ

ನವದೆಹಲಿ, ಫೆ. 1 (ಯುಎನ್ಐ)– ನೆಲಸಮಗೊಂಡಿರುವ ವಿವಾದಿತ ಬಾಬರಿ ಮಸೀದಿ ಕಟ್ಟಡದ ಬಾಗಿಲು ತೆರೆದ ಎಂಟನೇ ವರ್ಷಾಚರಣೆ ಅಂಗವಾಗಿ ಇಂದು ರಾಷ್ಟ್ರದ ನಾನಾ ಭಾಗಗಳಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಮಸೀದಿ ಮರು ನಿರ್ಮಾಣ ಕೋರಿ ಮೌನ ಮೆರವಣಿಗೆ ನಡೆಸಿ, ಬಂಧನಕ್ಕೊಳಗಾದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !