ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 15–3–1994

Last Updated 14 ಮಾರ್ಚ್ 2019, 17:18 IST
ಅಕ್ಷರ ಗಾತ್ರ

ಭಾರತ–ಬ್ರಿಟನ್ ಐತಿಹಾಸಿಕ ಆರ್ಥಿಕ ಒಪ್ಪಂದಕ್ಕೆ ಸಹಿ
ಲಂಡನ್, ಮಾ. 14 (ಪಿಟಿಐ, ಯುಎನ್‌ಐ):ಉಭಯ ದೇಶಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ಮತ್ತು ರಕ್ಷಣೆ ಒದಗಿಸುವ ಹತ್ತು ವರ್ಷಗಳ ಅವಧಿಯ ಐತಿಹಾಸಿಕ ಆರ್ಥಿಕ ಒಪ್ಪಂದಕ್ಕೆ ಭಾರತ–ಬ್ರಿಟನ್ ಇಂದು ಸಹಿ ಹಾಕಿದವು.

ಭಾರತ ಈ ರೀತಿಯ ಒಪ್ಪಂದ ಏರ್ಪಡಿಸಿಕೊಂಡಿರುವ ಮೊದಲ ದೇಶ ಬ್ರಿಟನ್. ಬ್ರಿಟನ್ ಪ್ರಧಾನಿಯವರ ಆಧಿಕೃತ ನಿವಾಸ ನಂ. 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಒಪ್ಪಂದಕ್ಕೆ ಭಾರತದ ಪರವಾಗಿ ಭಾರತದ ಹೈಕಮೀಷನರ್ ಎಲ್.ಎಂ. ಸಿಂಘ್ವಿ ಮತ್ತು ಬ್ರಿಟನ್ ಪರವಾಗಿ ವಿದೇಶಾಂಗ ಕಾರ್ಯದರ್ಶಿ ಡಗ್ಲಾಸ್ ಹರ್ಡ್ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಬ್ರಿಟನ್ ಪ್ರಧಾನಿ ಜಾನ್ ಮೇಜರ್ ಹಾಜರಿದ್ದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪರಿಶೀಲನೆಯಲ್ಲಿ
ನವದೆಹಲಿ, ಮಾ. 14:ಬೆಂಗಳೂರು ಸಮೀಪ‍ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವೊಂದನ್ನು ನಿರ್ಮಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಗುಲಾಂ ನಬಿ ಆಜಾದ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT