ಭಾನುವಾರ, ಆಗಸ್ಟ್ 25, 2019
21 °C

ಗುರುವಾರ 04 ಆಗಸ್ಟ್‌, 1994

Published:
Updated:

ಕ್ರಿಯಾ ವರದಿ: ಪ್ರಗತಿ ಕಾಣದ ಸರ್ಕಾರ– ಪ್ರತಿಪಕ್ಷ ಮಾತುಕತೆ
ನವದೆಹಲಿ, ಆ. 3 (ಯುಎನ್‌ಐ, ಪಿಟಿಐ)– ಷೇರು ಹಗರಣ ಕುರಿತು ಕ್ರಮ ಕೈಗೊಂಡ ವರದಿಯ ಮೇಲೆ ಸಂಸತ್ತಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಲೋಕಸಭೆಯ ಸ್ವೀಕರ್‌ ಶಿವರಾಜ ಪಾಟೀಲ್‌ ಅವರು ವಿವಿಧ ಪಕ್ಷಗಳ ನಾಯಕರೊಂದಿಗೆ ಇಂದು ನಡೆಸಿದ ಎರಡು ಸುತ್ತಿನ ಮಾತುಕತೆ ವಿಫಲವಾಯಿತು.

ಮಧ್ಯಾಹ್ನ ಸ್ಪೀಕರ್‌ ಅವರು ನಡೆಸಿದ ಎರಡು ಗಂಟೆ ಕಾಲ ಜರುಗಿದ ಸಭೆ ಹಾಗೂ ರಾತ್ರಿ ಅವರು ನಡೆಸಿದ ಭೋಜನಕೂಟದ ಸಭೆ ಈ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾದವು.

ರಾಜೀನಾಮೆ ಇಲ್ಲ: ಮನಮೋಹನ್‌ ಸ್ಪಷ್ಟನೆ
ನವದೆಹಲಿ, ಆ.3 (ಪಿಟಿಐ)– ಕೇಂದ್ರ ಸಂಪುಟಕ್ಕೆ ತಾವು ರಾಜೀನಾಮೆ ನೀಡಿರುವುದಾಗಿ ಕೇಳಿಬಂದ ವದಂತಿಗಳನ್ನು ಹಣಕಾಸು ಸಚಿವ ಡಾ. ಮನಮೋಹನ್‌ ಸಿಂಗ್‌ ಇಂದು ಇಲ್ಲಿ ನಿರಾಕರಿಸಿದರು.

‘ಅದು ಬರೀ ವದಂತಿ. ನಾನಂತೂ ರಾಜೀನಾಮೆ ಸಲ್ಲಿಸಿಲ್ಲ’ ಎಂದು ನಿರಾಳವಾಗಿದ್ದ ಸಿಂಗ್‌ ಸಂಸತ್‌ ಭವನದ ತಮ್ಮ ಕೊಠಡಿಯಲ್ಲಿ ಪಿಟಿಐ ಜತೆ ಮಾತನಾಡುತ್ತ ತಿಳಿಸಿದರು.

Post Comments (+)