ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 16–10–1994

Last Updated 15 ಅಕ್ಟೋಬರ್ 2019, 17:26 IST
ಅಕ್ಷರ ಗಾತ್ರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೇರು ಸಾಧನೆ– ಪಿ.ಎಸ್.ಎಲ್.ವಿ–ಡಿ 2 ಯಶಸ್ವಿ ಉಡಾವಣೆ
ಶ್ರೀಹರಿಕೋಟಾ, ಅ. 15 (ಪಿಟಿಐ)– ಶ್ರೀಹರಿಕೋಟಾದ ಶಾರ್ ಉಡಾವಣಾ ನೆಲೆಯಿಂದ ಇಂದು ಮುಂಜಾನೆ 10.32ಕ್ಕೆ ಪೋಲಾರ್ ಉಪಗ್ರಹ ಉಡಾವಣಾ ವಾಹಕ ಪಿ.ಎಸ್.ಎಲ್.ವಿ– ಡಿ 2 ಅನ್ನು ಯಶಸ್ವಿಯಾಗಿ ಉಡಾಯಿಸಲಾಯಿತು.

ಇದರೊಂದಿಗೆ ಭಾರತ ಸಾವಿರ ಕಿಲೊ ತೂಕದ ಉಪಗ್ರಹವನ್ನು ಉಡಾಯಿಸುವ ಸಾಮರ್ಥ್ಯ ಪಡೆದ ವಿಶ್ವದ ಆರನೆಯ ರಾಷ್ಟ್ರವಾಗಿದ್ದು, ಕಡಿಮೆ ಎತ್ತರದ ಕಕ್ಷೆಯ ಸಂಪರ್ಕ ಉಪಗ್ರಹ ಹಾರಿಸುವ ವಿಶ್ವ ಮಾರುಕಟ್ಟೆ ಪ್ರವೇಶಿಸಿದಂತಾಗಿದೆ.

ಕಡಿಮೆ ಎತ್ತರದ ಕಕ್ಷೆಗೆ ಸಾವಿರ ಕಿಲೊ ತೂಕದ ಉಪಗ್ರಹ ಹಾರಿಬಿಡುವ ಸಾಮರ್ಥ್ಯದ ಇತರ ದೇಶಗಳೆಂದರೆ ಅಮೆರಿಕ, ರಷ್ಯ, ಫ್ರಾನ್ಸ್, ಜಪಾನ್ ಮತ್ತು ಚೀನಾ.

ಮಧ್ಯಾಹ್ನ ಭೋಜನ: ಕೇಂದ್ರ ನೆರವು
ನವದೆಹಲಿ, ಅ. 15 (ಪಿಟಿಐ)– ದೇಶದಾದ್ಯಂತ ಶಾಲಾ ಕಾಲೇಜು ಹಾಗೂ ವಸತಿನಿಲಯಗಳಲ್ಲಿ ಮಧ್ಯಾಹ್ನದ ಭೋಜನ ಕಾರ್ಯಕ್ರಮ ಆರಂಭಿಸುವ ಸಲುವಾಗಿ ಗೋಧಿ ಹಾಗೂ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ನೀಡಲು ಕೇಂದ್ರ ಸಿದ್ಧವಿದೆ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಪ್ರಕಟಿಸಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಅದರಲ್ಲೂ ಸಣ್ಣ ಪ್ರಮಾಣದ ಕೈಗಾರಿಕಾ ವಲಯದ ಘಟಕಗಳು ಮಕ್ಕಳಿಗಾಗಿ ಪೌಷ್ಟಿಕ ಆಹಾರ ತಯಾರಿಸಿ ನೆರವು ನೀಡುವುವು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT