ಭಾರತದ ಜತೆ ಚರ್ಚೆಗೆ ಪಾಕ್ ಷರತ್ತು

7

ಭಾರತದ ಜತೆ ಚರ್ಚೆಗೆ ಪಾಕ್ ಷರತ್ತು

Published:
Updated:

ಭಾರತದ ಜತೆ ಚರ್ಚೆಗೆ ಪಾಕ್ ಷರತ್ತು

ಇಸ್ಲಾಮಾಬಾದ್, ಜ. 23 (ಪಿಟಿಐ)– ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಇನ್ನೊಂದು ಸುತ್ತಿನ ಮಾತುಕತೆಗೆ ಪಾಕಿಸ್ತಾನದ ವಿದೇಶಾಂಗ ಖಾತೆಯ ಸಚಿವ ಸರ್ದಾರ್ ಆಸೀಫ್ ಅಹ್ಮದ್ ಅಲಿ ಷರತ್ತು ವಿಧಿಸಿದ್ದಾರೆ. ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಭಾರತ ನಿಲ್ಲಿಸಬೇಕು. ಹಜರತ್‌ಬಾಲ್ ಸಮುಚ್ಚಯದಲ್ಲಿನ ಮುತ್ತಿಗೆಯನ್ನು ತೆಗೆದುಹಾಕಬೇಕು. ಬಂಧನದಲ್ಲಿರುವ ಎಲ್ಲ ಹುರಿಯತ್ ಕಾನ್ಫರೆನ್ಸ್ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿ
ಗಳನ್ನು ‘ಕೊಲ್ಲುವುದನ್ನು’ ನಿಲ್ಲಿಸಬೇಕು– ಇವು ಈ ಷರತ್ತುಗಳಾಗಿವೆ.

ಹುಬ್ಬಳ್ಳಿಗೆ ಸೇನೆ: ನಾಳೆಯಿಂದ ಕರ್ಫ್ಯೂ

ಹುಬ್ಬಳ್ಳಿ, ಜ. 23– ಸತತ ಮೂರನೆಯ ಬಾರಿಗೆ ಹುಬ್ಬಳ್ಳಿಯ ಗಣರಾಜ್ಯೋತ್ಸವದ ಸಡಗರಕ್ಕೆ ಕರ್ಫ್ಯೂ ಅಡ್ಡಿಯಾಗುತ್ತಿದ್ದು ಈ ಬಾರಿ ನಗರದ ಎಂಟು ಠಾಣೆಗಳ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯರಾತ್ರಿವರೆಗೆ ಅದು ವ್ಯಾಪಿಸಿದೆ.

ನಗರದ ಮಧ್ಯ ಭಾಗದಲ್ಲಿರುವ ಈದಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಕೆಲವರ ಯತ್ನವನ್ನು ತಡೆಯಲು ಕರ್ಫ್ಯೂ ವಿಧಿಸುವ ಆದೇಶವನ್ನು ಪೊಲೀಸ್ ಕಮಿಷನರ್ ಕೆ.ಎಸ್. ಮೆಂಡೆಗಾರ್ ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !