ಕಾನ್ಪುರ ಗಲಭೆ: ಮೂವರ ಸಾವು

7
ವಾರ

ಕಾನ್ಪುರ ಗಲಭೆ: ಮೂವರ ಸಾವು

Published:
Updated:

ಕಾನ್ಪುರ ಗಲಭೆ: ಮೂವರ ಸಾವು

ಕಾನ್ಪುರ, ಫೆ. 10 (ಯುಎನ್‌ಐ, ಪಿಟಿಐ)– ಕಾನ್ಪುರದ ಬಾಬುಪುರ್ವಾ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಬಿಜೆಪಿ ಮಾಜಿ ಕಾರ್ಪೊರೇಟರ್ ಕಾಲಾ ಬಚ್ಚಾ ಅವರ ಹತ್ಯೆಯಿಂದ ಭುಗಿಲೆದ್ದ ಹಿಂಸಾಚಾರ ಮತ್ತು ಗಲಭೆ ಇಂದು ಜಿಲ್ಲೆಯ ಇತರ ಪ್ರದೇಶಗಳಿಗೂ ವ್ಯಾಪಿಸಿತು. ಗಲಭೆಯಲ್ಲಿ ಮೂವರು ಸತ್ತಿದ್ದಾರೆ. ಆದರೆ ಸತ್ತವರ ಸಂಖ್ಯೆ ಐದು ಎಂದು ಅನಧಿಕೃತ ವರದಿಗಳು ತಿಳಿಸಿವೆ.

ಪಾನ ನಿಷೇಧ ಅಸಾಧ್ಯ

ಬೆಂಗಳೂರು, ಫೆ. 10– ರಾಜ್ಯದಲ್ಲಿ ಪೂರ್ಣ ಪಾನ ನಿಷೇಧವನ್ನು ಜಾರಿಗೆ ತರುವ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಇಂದು ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದರು.

ಸಾಹಿತ್ಯ ಸಮ್ಮೇಳನ ಇಂದು ಆರಂಭ

ಮಂಡ್ಯ, ಫೆ. 10– ಸಕ್ಕರೆಯ ಸಿಹಿನಾಡಿನಲ್ಲಿ ‘ಅಕ್ಕರೆ’ಯ ಜನ ಸಮೂಹದ ಎದುರು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು 63ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಳೆ (ಫೆಬ್ರುವರಿ 11) ಇಲ್ಲಿನ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಭವ್ಯವಾದ ‘ಮಹಾಕವಿ ಕುವೆಂಪು ಮಂಟಪ’ದಲ್ಲಿ ಉದ್ಘಾಟಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !