ಶುಕ್ರವಾರ, ಏಪ್ರಿಲ್ 3, 2020
19 °C

25 ವರ್ಷಗಳ ಹಿಂದೆ ಸೋಮವಾರ, 13–3–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್‌ಗೆ ಬಿಜೆಪಿ ಸರ್ಕಾರ ಒರಿಸ್ಸಾ ಕಾಂಗೈ ಪಕ್ಷದ ವಶ ಮಹಾರಾಷ್ಟ್ರ ಸ್ಥಿತಿ ಅತಂತ್ರ
ನವದೆಹಲಿ, ಮಾರ್ಚಿ 12 (ಪಿಟಿಐ)– ಗುಜರಾತಿನಲ್ಲಿ ಬಿಜೆಪಿಯು ಕಾಂಗೈಯಿಂದ ಅಧಿಕಾರ ಕಿತ್ತುಕೊಂಡಿದ್ದು ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ದೊರೆಯದೆ ತ್ರಿಶಂಕು ಸ್ಥಿತಿ ಉಂಟಾಗುವ ಸೂಚನೆಗಳಿವೆ. ಆದರೆ ಒರಿಸ್ಸಾದಲ್ಲಿ ಕಾಂಗೈ ನಿಚ್ಚಳ ಬಹುಮತದತ್ತ ದೃಢ ಹೆಜ್ಜೆ ಇರಿಸಿದೆ. 

ಮಹಾರಾಷ್ಟ್ರದಲ್ಲಿ ಈಗಿನ ಒಲವಿನ ಪ್ರಕಾರ ಕಾಂಗೈ ಏಕೈಕ ದೊಡ್ಡ ಪಕ್ಷವಾಗಿ ಉದಯಿಸುವ ಸಾಧ್ಯತೆಯಿದೆ.

ಕೇಂದ್ರ ನಾಯಕತ್ವ ಬದಲಾವಣೆಗೆ ಆಗ್ರಹ
ನವದೆಹಲಿ, ಮಾರ್ಚಿ 12 (ಪಿಟಿಐ)– ಮಹಾರಾಷ್ಟ್ರ ಹಾಗೂ ಗುಜರಾತಿನಲ್ಲಿ ಕಾಂಗ್ರೆಸ್‌ಗಾದ ಬಲವಾದ ಆಘಾತದಿಂದ ಪಕ್ಷದಲ್ಲಿ ಅಸಮಾಧಾನ ತೀವ್ರವಾಗಿದ್ದು, ಪಕ್ಷದ ಸಂಸತ್‌ ಸದಸ್ಯರ ಸಭೆಯಲ್ಲಿ ನಾಯಕತ್ವ ಬದಲಾವಣೆ ವಿಷಯವನ್ನು ಎತ್ತಲಾಗುವುದು ಎಂದು ಕೇಂದ್ರದ ಮಾಜಿ ಸಚಿವರೊಬ್ಬರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕುಮಾರಮಂಗಲಂ, ಪಕ್ಷ ಯಾರೊಬ್ಬರ ‘ಜಮೀನ್ದಾರಿ’ ಸ್ವತ್ತಲ್ಲ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)