ಶನಿವಾರ, ಅಕ್ಟೋಬರ್ 19, 2019
28 °C
1994

ಭಾನುವಾರ, 2–10–1994

Published:
Updated:

ಪ್ಲೇಗ್: ದಸರಾ ರದ್ದಿಗೆ ಒತ್ತಾಯ– ಶೀಘ್ರವೇ ಸರ್ಕಾರದ ನಿರ್ಧಾರ

ಬೆಂಗಳೂರು, ಅ. 1– ಪ್ಲೇಗ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ದಸರಾ ಉತ್ಸವ ರದ್ದು ಮಾಡುವಂತೆ ಮೈಸೂರು ನಗರಪಾಲಿಕೆ ಮಾಡಿರುವ ಮನವಿ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರದ ಅಧಿಕೃತ ವಕ್ತಾರರಾದ ರೇಷ್ಮೆ ಸಚಿವ ಡಾ. ಜಿ.ಪರಮೇಶ್ವರ ಇಂದು ಇಲ್ಲಿ ಹೇಳಿದರು.

ಮತ್ತೊಂದು ಹುಲಿ ಯೋಜನೆ

ಬೆಂಗಳೂರು, ಅ. 1– ರಾಜ್ಯದಲ್ಲಿ ಮತ್ತೊಂದು ‘ಹುಲಿ ಸಂರಕ್ಷಣಾ ಯೋಜನೆ’ಯನ್ನು (ಟೈಗರ್ ಪ್ರಾಜೆಕ್ಟ್) ಭದ್ರಾ ಅಭಯಾರಣ್ಯದಲ್ಲಿ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

ಅರಣ್ಯ ಇಲಾಖೆಯ ವನ್ಯಜೀವಿ ಘಟಕ ಮಲ್ಲೇಶ್ವರದಲ್ಲಿನ ರಾಷ್ಟ್ರೀಯ ವಿದ್ಯಾಲಯದ ಆವರಣದಲ್ಲಿ ಇಂದು ಏರ್ಪಡಿಸಿದ್ದ 40ನೇ ವನ್ಯಪ್ರಾಣಿ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಘಟಕದ ಮುಖ್ಯಸ್ಥ ವಿ.ಟಿ. ಆಳ್ವ ಇದನ್ನು ತಿಳಿಸಿದರು.

24 ಕೊಲೆಗಳ ವಿಕೃತಕಾಮಿ ನಾಗರಾಜನಿಗೆ ಮರಣದಂಡನೆ

‌ಬೆಂಗಳೂರು, ಅ. 1– ರಾಜ್ಯದ ಒಳಗೆ ಮತ್ತು ಹೊರಗೆ 24 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿರುವ ವಿಕೃತಕಾಮಿ ನಾಗರಾಜನಿಗೆ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸತ್ಯಮೂರ್ತಿ ಹೊಳ್ಳ ಅವರು ಮರಣದಂಡನೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

Post Comments (+)