ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 9–10–1994

Last Updated 8 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಕನ್ನಡಕ್ಕೇ ಪ್ರಾಶಸ್ತ್ಯ; ಉರ್ದು ವಾರ್ತೆ ಪ್ರಸಾರ ಸಮಯ ಬದಲು– ಹೋರಾಟ ನಿಲ್ಲದು: ಚಿ.ಮೂ.
ಬೆಂಗಳೂರು, ಅ. 8–
‘ಬೆಂಗಳೂರು ದೂರದರ್ಶನದಲ್ಲಿ ನಾಳೆಯಿಂದ ರಾತ್ರಿ 7.45ಕ್ಕೆ ಉರ್ದು ವಾರ್ತೆ ಪ್ರಸಾರವಾಗುವುದಿಲ್ಲ’ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಇಲ್ಲಿ ತಿಳಿಸಿದರು.

‘ಈ ತಿಂಗಳ ಎರಡರಿಂದ ರಾತ್ರಿ 7.45ಕ್ಕೆ ಬಿತ್ತರಗೊಳ್ಳುತ್ತಿರುವ ಈ ವಾರ್ತಾ ಪ್ರಸಾರವನ್ನು ನಿಲ್ಲಿಸಲಾಗುವುದು. ಪ್ರಸಾರದ ವೇಳೆಯಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಅದನ್ನು ಮುಂದೆ ಪ್ರಕಟಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಮತ್ತೆ ಹಿಂಸೆ; ಗೋಲಿಬಾರ್ ಸತ್ತವರ ಸಂಖ್ಯೆ 18ಕ್ಕೆ ಏರಿಕೆ
ಬೆಂಗಳೂರು, ಅ. 8
– ಬೆಂಗಳೂರು ದೂರದರ್ಶನದ ಉರ್ದು ವಾರ್ತಾ ಪ್ರಸಾರ ರದ್ದುಪಡಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಚಳವಳಿಯ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರ್‌ಗೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಲೂಟಿ– ವಿಧ್ವಂಸಕ ಕೃತ್ಯಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ‍ಪಾಸ್ತಿ ನಷ್ಟವಾಗಿದೆ. ಒಟ್ಟು 238 ಮಂದಿ ಗಾಯಗೊಂಡಿದ್ದು, 99 ಜನರು ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT