ಶುಕ್ರವಾರ, ಡಿಸೆಂಬರ್ 6, 2019
21 °C

ಭಾನುವಾರ, 13–11–1994

Published:
Updated:

ಅಬ್ಬರವಿಲ್ಲದ ಪ್ರಚಾರ: ಶೇಷನ್‌ ಕ್ರಮಕ್ಕೆ ಪ್ರಧಾನಿ ಕುಮ್ಮಕ್ಕು
ಬೆಂಗಳೂರು, ನ. 12– ಜೀಪು, ಕಾರುಗಳಲ್ಲಿ ಶರವೇಗದಿಂದ ಸಂಚರಿಸಿ ನಡೆಯುತ್ತಿದ್ದ ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್ ಅವರ ಕ್ರಮವನ್ನು ಕಾಂಗೈ ಅಧ್ಯಕ್ಷ ಮತ್ತು ಪ್ರಧಾನಿ ಪಿ.ವಿ. ನರಸಿಂಹರಾವ್‌ ಇಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಶೇಷನ್ ಕ್ರಮದಿಂದ ತಮಗೆ ಅತೀವ ಸಂತಸ ಉಂಟಾಗಿದೆ, ದಶಕಗಳ ಹಿಂದಿನಂತೆ ಕಾಲ್ನಡಿಗೆಯಲ್ಲಿ ಮನೆ ಮನೆಗೆ ಹೋಗಿ ಜನರ ಮನಸ್ಸನ್ನು ಗೆಲ್ಲುವಂತಹ ಪ್ರಚಾರ ಕಾರ್ಯ ಆರಂಭವಾಗಿರುವುದು ಸ್ವಾಗತಾರ್ಹ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

ಭಾರತದ ಮೇಲುಗೈ ಒಪ್ಪಿದ ಬೆನಜೀರ್: ನವಾಜ್
ಇಸ್ಲಾಮಾಬಾದ್, ನ. 12 (ಪಿಟಿಐ)– ಪಾಕಿಸ್ತಾನ ಸರ್ಕಾರ ವಿಶ್ವಸಂಸ್ಥೆಯಲ್ಲಿ ಮಂಡಿಸಲು ಯತ್ನಿಸುತ್ತಿರುವ ಕಾಶ್ಮೀರದ ಮೇಲಿನ ನಿರ್ಣಯವನ್ನು ವಾಪಸು ಪಡೆಯುವಂತೆ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ನೇತೃತ್ವದಲ್ಲಿ ಪ್ರತಿಪಕ್ಷಗಳು ವಾಕ್‌ಪ್ರಹಾರ ಆರಂಭಿಸಿವೆ.

‘ಆ ಪ್ರದೇಶದಲ್ಲಿ ಭಾರತದ ಮೇಲುಗೈಯನ್ನು ಪ್ರಧಾನಿ ಬೆನಜೀರ್ ಭುಟ್ಟೋ ಅವರು ಮಾನಸಿಕವಾಗಿ ಒಪ್ಪಿಕೊಂಡಿದ್ದಾರೆ’ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಪಿಸಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ಭುಟ್ಟೋ ಅವರು ಪ್ರಾಮಾಣಿಕರಾಗಿಲ್ಲ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)