ಮಂಗಳವಾರ, ಡಿಸೆಂಬರ್ 10, 2019
19 °C
ಗುರುವಾರ

ಗುರುವಾರ, 17–11–1994

Published:
Updated:

ಕೇಂದ್ರದ ಅರ್ಥ ನೀತಿ ವಿರುದ್ಧ ವಿಭಜಕ ಶಕ್ತಿ ಹುಯಿಲು: ರಾವ್
ಉಡುಪಿ, ನ. 16–
ಕೇಂದ್ರದ ಆರ್ಥಿಕ ನೀತಿ ವಿರುದ್ಧ ಹುಯಿಲೆಬ್ಬಿಸುವ ಮೂಲಕ ’ಕೆಲವು ವಿಭಜಕ ಶಕ್ತಿಗಳು ಮೇಲುಗೈ ಸಾಧಿಸಲು ಯತ್ನಿಸಿವೆ. ಇದು ದೇಶಕ್ಕೆಮಾರಕ’ ಎಂದು ಪ್ರಧಾನಿ ಪಿ.ವಿ. ನರಸಿಂಹ ರಾವ್ ಇಂದು ಎಚ್ಚರಿಸಿದರು. ಸಮೀಪದ ಬ್ರಹ್ಮಾವರದಲ್ಲಿ ಚುನಾವಣಾ ಭಾಷಣ ಮಾಡಿದ ಅವರು ವಿದ್ಯುತ್ ಕ್ಷೇತ್ರಕ್ಕೆ ಸರ್ಕಾರೇತರ ಬಂಡವಾಳ ಸಂಗ್ರಹಿಸುವ ಈ ಶಕ್ತಿಗಳು ದೇಶದ ಸ್ವಾತಂತ್ರ್ಯ ಒತ್ತೆಯಿಡುವ ಕ್ರಮವೆಂದು ಕರೆಯುತ್ತಿರುವುದಕ್ಕೆ ಆಕ್ಷೇಪಿಸಿದರು.

ದಳಕ್ಕೆ ಗ್ರಾಮೀಣರ ಒಲವು: ದೇವೇಗೌಡ
ಬೆಂಗಳೂರು, ನ. 16–
‘ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಹಾಗೂ ಕಾಂಗೈ ನಡುವೆ ತೀವ್ರ ಸೆಣಸಾಟ ನಡೆಯಲಿದೆ’ ಎಂದು ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ವ್ಯಾಖ್ಯಾನಿಸಿದರು. ರಾಜ್ಯ ಸರ್ಕಾರದ ದಿಕ್ಕೆಟ್ಟ ಆಡಳಿತದಿಂದಲೂ ಬೇಸತ್ತಿರುವ ಜನರು ಕಾಂಗೈ ಬಗ್ಗೆ ಕೆಂಡ ಕಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ, ಗ್ರಾಮೀಣ ಪ್ರದೇಶದ ಜನರಿಗೆ ದಳದ ಬಗ್ಗೆ ಹೆಚ್ಚಿನ ಒಲವಿದೆ ಎಂಬುದು ತಮ್ಮ ಪ್ರವಾಸದ ಸಂದರ್ಭದಲ್ಲಿ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)