ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 3–1–1995

Last Updated 2 ಜನವರಿ 2020, 22:13 IST
ಅಕ್ಷರ ಗಾತ್ರ

ವ್ಯವಸಾಯ, ಗ್ರಾಮೀಣ ಕ್ಷೇತ್ರಕ್ಕೆ ಅಧಿಕ ಸಾಲ
ಮುಂಬೈ, ಜ. 2 (ಪಿಟಿಐ)– ಗ್ರಾಮೀಣ ಸಾಲ ವ್ಯವಸ್ಥೆಗೆ ವಿಶೇಷ ಗಮನ ನೀಡಿ ಹೊಸ ವರ್ಷದಲ್ಲಿ ಕೃಷಿ ವಲಯಕ್ಕೆ ಹೆಚ್ಚು ಬ್ಯಾಂಕ್ ಸಾಲ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಿಸರ್ವ್‌ ಬ್ಯಾಂಕ್ ಗವರ್ನರ್ ಡಾ. ಸಿ. ರಂಗರಾಜನ್ ಇಂದು ಇಲ್ಲಿ ಪ್ರಕಟಿಸಿದರು.

ವಿಜಯಾ ಬ್ಯಾಂಕಿನ ಮೊತ್ತಮೊದಲ ಪೂರ್ಣ ಕಂಪ್ಯೂಟರೀಕೃತ ಹಣ ವರ್ಗಾವಣೆ ಸೇವಾ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಕೃಷಿ‍ಪತ್ತಿನ ಸಹಕಾರಿ ಸಂಘಗಳು ಸೇರಿದಂತೆ ಗ್ರಾಮೀಣ ಸಾಲ ನೀಡಿಕೆ ಸಂಸ್ಥೆಗಳನ್ನು ಬಲಪಡಿಸಲಾಗುವುದು ಎಂದರು.

ಬೆಂಗಳೂರಿನ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ
ನವದೆಹಲಿ, ಜ. 2 (ಪಿಟಿಐ)– ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಇಬ್ಬರು ವಿಜ್ಞಾನಿಗಳು ಸೇರಿದಂತೆ ಆರು ವಿಜ್ಞಾನಿಗಳಿಗೆ ಈ ಸಲದ ಭಾರತೀಯ ರಾಷ್ಟ್ರೀಯ ವಿಜ್ಞಾನ ಆಕಾಡೆಮಿ (ಇನ್ಸಾ) ಪ್ರಶಸ್ತಿ ದೊರೆತಿದೆ.

ಭಾರತೀಯ ವಿಜ್ಞಾನ ಮಂದಿರದ ಭೌತಶಾಸ್ತ್ರಜ್ಞ ಪ್ರೊ. ಟಿ.ವಿ. ರಾಮಕೃಷ್ಣನ್ ಅವರಿಗೆ ಇನ್ಸಾದ ಕೆ.ಎಸ್.ಕೃಷ್ಣನ್ ಸ್ಮಾರಕ ಪದಕ, ಇನ್ನೊಬ್ಬ ವಿಜ್ಞಾನಿ ಡಾ. ಎಂ. ವಿಜಯನ್‌ ಅವರಿಗೆ ಜಿ.ಎನ್. ರಾಮಚಂದ್ರ ಪದಕ ನೀಡಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT