ಭಾನುವಾರ, ಅಕ್ಟೋಬರ್ 20, 2019
28 °C

ಸೋಮವಾರ, 10–10–1994

Published:
Updated:

ಸತ್ತವರು ಒಟ್ಟು 23; ಪ್ರಸಾರವಾಗದ ಉರ್ದು ವಾರ್ತೆ, ಹಿಂಸಾಚಾರ

ಬೆಂಗಳೂರು, ಅ. 9– ನಗರದಲ್ಲಿ ಮೂರು ದೇಹಗಳು ಪತ್ತೆ ಹಾಗೂ ಹಲ್ಲೆ ಇರಿತದಿಂದ ಗಾಯಗೊಂಡಿದ್ದ ಇಬ್ಬರು ಮೃತಪಡುವುದ ರೊಂದಿಗೆ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾದ ಉರ್ದು ವಾರ್ತೆ ವಿರುದ್ಧ ಪ್ರತಿಭಟಿಸಿ ಕಳೆದ ಮೂರು ದಿನದಿಂದ ನಡೆದ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿದೆ. ಕೆಲವೆಡೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗುಂಡು ಹಾರಿಸ ಬೇಕಾಯಿತು.

ವ್ಯಾಪಕ ಪ್ರತಿಭಟನೆ, ಹಿಂಸಾಚಾರದ ಹಿನ್ನೆಲೆಯಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಇಂದು ರಾತ್ರಿ 7.45ರ ಉರ್ದು ವಾರ್ತೆಯನ್ನು ಹಿಂತೆಗೆದುಕೊಂಡಿತು.

ಉರ್ದು ವಾರ್ತೆ ಬೇಡ: ರಾಜ್

ಬೆಂಗಳೂರು, ಅ. 9– ‘ಬೆಂಗಳೂರು ದೂರದರ್ಶನದಿಂದ ಉರ್ದು ವಾರ್ತಾ ಪ‍್ರಸಾರದ ವೇಳೆಯನ್ನು ಪುನರ್ ನಿಗದಿಗೊಳಿಸುತ್ತೇವೆ ಎಂದು ಹೇಳಿರುವುದು ಗೊಂದಲಕ್ಕೆಡೆ ಮಾಡಿದೆ’ ಎಂದು ವರನಟ ಡಾ. ರಾಜ್‌ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

‘ಯಾವ ಕಾರಣಕ್ಕೂ ಯಾವುದೇ ಕಾಲದಲ್ಲೂ ಉರ್ದು ವಾರ್ತೆಗಳನ್ನು ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರಿಸಲಾಗದು. ಈ ಕೇಂದ್ರ ಕನ್ನಡ ಭಾಷೆಗಾಗಿಯೇ ಮೀಸಲಾಗಿರಬೇಕು’ ಎಂದು ಕನ್ನಡ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಡಾ. ರಾಜ್‌ಕುಮಾರ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರು, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಸಿ.ವಿ.ಎಲ್. ಶಾಸ್ತ್ರಿ, ನಿರ್ದೇಶಕರ ಸಂಘದ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ (ಬಾಬು) ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post Comments (+)