ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 18–10–1994

1994
Last Updated 17 ಅಕ್ಟೋಬರ್ 2019, 18:44 IST
ಅಕ್ಷರ ಗಾತ್ರ

ಶ್ರೀಕಂಠದತ್ತ ಒಡೆಯರ್ಮತ್ತೆ ಕಾಂಗೈಗೆ

ಬೆಂಗಳೂರು, ಅ. 17– ಮಾಜಿ ಸಂಸತ್‌ ಸದಸ್ಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್‌ಗೆ ಮರಳಿದ್ದಾರೆ.

ಬೊಮ್ಮಾಯಿ ದಳಕ್ಕೆ ಮಾನ್ಯತೆ

ನವದೆಹಲಿ, ಅ. 17 (ಪಿಟಿಐ)– ಚುನಾವಣಾ ಆಯೋಗವು ಎಸ್.ಆರ್. ಬೊಮ್ಮಾಯಿ ನೇತೃತ್ವದ ಬಣವೇ ನಿಜವಾದ ಜನತಾದಳ ಎಂದು ಮಾನ್ಯ ಮಾಡಿದ್ದು, ‘ಚಕ್ರ’ ಚಿಹ್ನೆ ಬಳಸಲು ಅನುಮತಿ ನೀಡಿದೆ. ಈ ಚಿಹ್ನೆ ಬಳಸುವ ದಳದ (ಜಿ) ಗುಂಪಿನ ಬೇಡಿಕೆಯನ್ನು ತಳ್ಳಿಹಾಕಿದೆ.

ಎರಡೂ ಬಣಗಳ ಬೇಡಿಕೆಗಳ ವಿಚಾರಣೆ ನಡೆಸಿದ ನಂತರ 17 ಪುಟಗಳ ತೀರ್ಪನ್ನು ಓದಿದ ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್, ಚಿಹ್ನೆಯನ್ನು ಸ್ಥಗಿತಗೊಳಿಸಬೇಕೆಂಬ ದಳದ (ಜಿ) ಬಣದ ಬೇಡಿಕೆಯನ್ನು ತಳ್ಳಿಹಾಕಿದರು. ಪಕ್ಷದ ಸಾಂಸ್ಥಿಕ ಘಟಕಗಳಲ್ಲಿ ತನಗೆ ಬೆಂಬಲವಿದೆ ಎಂದು ದಳದ (ಜಿ) ಬಣ ದಾಖಲೆ ಸಲ್ಲಿಸಿದ್ದು, ಇದನ್ನು ತಳ್ಳಿಹಾಕುವಂತಿಲ್ಲ ಎಂದರು.

ಲೋಕಅದಾಲತ್‌ಗೆ ಶೀಘ್ರವೇ ಶಾಸನಬದ್ಧ ಸ್ಥಾನಮಾನ

ಬೆಂಗಳೂರು, ಅ. 17– ದೇಶದಲ್ಲಿ ಭಾರೀ ಯಶಸ್ಸು ಪಡೆದಿರುವ ಜನತಾ ನ್ಯಾಯಾಲಯ (ಲೋಕ ಅದಾಲತ್‌)ಗಳಿಗೆ ಆದಷ್ಟು ಶೀಘ್ರ ಶಾಸನಬದ್ಧ ಸ್ಥಾನಮಾನ ನೀಡಲಾಗುವುದು ಎಂದು ಪ್ರಧಾನಿ ಪಿ.ವಿ. ನರಸಿಂಹ ರಾವ್ ಪ್ರಕಟಿಸಿದರು.

‘ಮೊಕದ್ದಮೆಗಳ ಇತ್ಯರ್ಥದಲ್ಲಿ ಆಗುತ್ತಿರುವ ವಿಳಂಬ ಹೋಗಲಾಡಿಸಲು ಹಲವಾರು ಪರಿಹಾರೋಪಾಯಗಳನ್ನು ಜಾರಿಗೊಳಿಸಿದ್ದೇವೆ. ಅಲ್ಲದೆ ರಾಜಿ–ಸಂಧಾನದಂತಹ ಪರ್ಯಾಯ ಮಾರ್ಗಗಳ ಬಗ್ಗೆಯೂ ಯೋಚಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT