ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 18–11–1994

ಶುಕ್ರವಾರ
Last Updated 18 ನವೆಂಬರ್ 2019, 1:21 IST
ಅಕ್ಷರ ಗಾತ್ರ

ಪ್ರಧಾನಿಗೂ ಕಾಡಿದ ಶೇಷನ್ ಭಯ

ವಿಜಾಪುರ, ನ. 17– ಮುಖ್ಯ ಚುನಾವಣಾಧಿಕಾರಿ ಟಿ.ಎನ್. ಶೇಷನ್ ಅವರ ಕಠಿಣ ಕ್ರಮಗಳ ಭಯ ಇಂದು ಪ್ರಧಾನಿ ಪಿ.ವಿ. ನರಸಿಂಹರಾಯರನ್ನು ಕಾಡಿತು.

ಜಮಖಂಡಿಯಲ್ಲಿ ರೈತರ ಬೇಡಿಕೆಯೊಂದಕ್ಕೆ ಸ್ಪಷ್ಟ ಭರವಸೆ ನೀಡಲು ಅವರು ಹಿಂಜರಿದರು.

ಪ್ರಧಾನಿ ಪಿ.ವಿ.ಎನ್. ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗೈ ಸ್ಥಳೀಯ ಮುಖಂಡರು ಕೆಲವರು ಇಂಗ್ಲಿಷ್‌ನಲ್ಲಿದ್ದ ಬ್ಯಾನರ್ ಒಂದನ್ನು ಎತ್ತಿ ಹಿಡಿದರು. ‘ತೇರದಾಳ ಸಕ್ಕರೆ ಕಾರ್ಖಾನೆಗೆ ಲೈಸನ್ಸ್ ನೀಡಿ’ ಎಂದು ಈ ಬ್ಯಾನರ್‌ನಲ್ಲಿ ಮನವಿ ಮಾಡಲಾಗಿತ್ತು.

ನರಸಿಂಹರಾಯರು ಮಾತಿನ ಭರದಲ್ಲಿ ಈ ಬ್ಯಾನರ್ ಗಮನಿಸಿರಲಿಲ್ಲ. ಆದರೆ ಅವರು ಮಾತು ಮುಗಿಸಿದಾಗ ಸಿದ್ದು ನ್ಯಾಮಗೌಡ ಮತ್ತಿತರರು ಅವರ ಗಮನ ಸೆಳೆದರು. ವೇದಿಕೆಯಿಂದ ಇಳಿಯಹೊರಟಿದ್ದ ನರಸಿಂಹರಾಯರು ಮತ್ತೆ ಮೈಕ್ ಬಳಿ ಬಂದು ‘ಚುನಾವಣಾ ಆಯೋಗದ ಕಟ್ಟುನಿಟ್ಟಿನ ಸೂಚನೆ ಇದೆ. ನಾನು ಸಕ್ಕರೆ ಕಾರ್ಖಾನೆ ಬಗ್ಗೆ ಸ್ಪಷ್ಟ ಆಶ್ವಾಸನೆ ನೀಡುವುದಿಲ್ಲ. ಆದರೆ ರೈತರ ಹಿತವನ್ನು ಗಮನಿಸಲಾಗುವುದು’ ಎಂದು ಕೈಮುಗಿದರು.

ಸಕ್ಕರೆ ಕಾರ್ಖಾನೆ ಪರವಾನಗಿ ಸರಳೀಕರಣ

ಬೆಳಗಾವಿ, ನ. 17– ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳನ್ನು ಪರವಾನಗಿ (ಲೈಸನ್ಸ್) ವ್ಯಾಪ್ತಿಯಿಂದ ಹೊರಗಿಡುವ ಅಥವಾ ಸರಳಗೊಳಿಸುವ ಬಗೆಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಪ‍್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರಕಟಿಸಿದರು.

‌ಜಿಲ್ಲೆಯ 18 ಜನ ಕಾಂಗೈ ಅಭ್ಯರ್ಥಿಗಳ ಪರವಾಗಿ ಬಸವಪ್ರಭು ಕೋರೆ ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಆದರೆ ಈ ಕುರಿತು ತೆಗೆದುಕೊಳ್ಳುವ ತೀರ್ಮಾನದಿಂದ ಆಗಬಹುದಾದ ಪರಿಣಾಮಗಳ ಬಗೆಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT