ಶನಿವಾರ, ಜುಲೈ 24, 2021
25 °C

25 ವರ್ಷಗಳ ಹಿಂದೆ | ಭಾನುವಾರ, 2–7–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನು ಚಿಣ್ಣರಿಗೆ ಕಾಯುವ ಕೆಲಸ ಇಲ್ಲ
ಬೆಂಗಳೂರು, ಜುಲೈ 1–
ಬಿಸಿಲು, ಮಳೆ ಲೆಕ್ಕಿಸದೆ ಮಂತ್ರಿ ಮಹೋದಯರು ಹಾಗೂ ಗಣ್ಯ ವ್ಯಕ್ತಿಗಳ ಸ್ವಾಗತಕ್ಕೆ ಶಾಲಾ ಮಕ್ಕಳು ಕಾಯುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಈ ವ್ಯವಸ್ಥೆ ಯನ್ನು ಮುಂದುವರಿಸಿಕೊಂಡು ಹೋಗುವ ಶಾಲೆಗಳ ವಿರುದ್ಧ ಕಠಿಣ ಕ್ರಮ ತಪ್ಪಿದ್ದಲ್ಲ. ಈ ಭರವಸೆಯನ್ನು ಕೊಟ್ಟವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ.

ಸಚಿವರೂ ಸೇರಿದಂತೆ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸುವ ಸಲುವಾಗಿ ಶಾಲಾ ಮಕ್ಕಳು ಕೊನೆ ಮೊದಲು ಇಲ್ಲದಂತೆ ಕಾಯುವುದು ತಪ್ಪಬೇಕು. ಈ ಅಭ್ಯಾಸ ನಿಲ್ಲಿಸಲು ಎಲ್ಲ ಶಾಲೆಗಳಿಗೆ ಸೂಚಿಸಲಾಗಿದೆ. ಈ ಸೂಚನೆಯನ್ನು ಮೀರುವ ಶಾಲೆಯವರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಗುಂಡೇಟಿಗೆ ಡಕಾಯಿತ ಬಲಿ
ನೆಲಮಂಗಲ, ಜುಲೈ 1–
ನಗ– ನಾಣ್ಯ ದೋಚಲು ಇಲ್ಲಿನ ಎರಡು ಮನೆಗಳಿಗೆ ನುಗ್ಗಿದ ಡಕಾಯಿತರ ತಂಡದ ಜತೆ ಏಕಾಂಗಿಯಾಗಿ ಹೋರಾಡಿದ ಯುವಕನೊಬ್ಬ ಹಾರಿಸಿದ ಗುಂಡಿಗೆ ಒಬ್ಬ ಡಕಾಯಿತ ಬಲಿಯಾಗಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.