ಬುಧವಾರ, ಆಗಸ್ಟ್ 4, 2021
25 °C

25 ವರ್ಷಗಳ ಹಿಂದೆ | ಶನಿವಾರ, 8–7–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2,800 ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಕ್ರಮ

ಬೆಂಗಳೂರು, ಜುಲೈ 7– ಪ‍್ರೌಢಶಾಲೆಗಳಲ್ಲಿ ಖಾಲಿಯಿರುವ 2,000 ಶಿಕ್ಷಕರ ಹುದ್ದೆ ಹಾಗೂ ಕಿರಿಯ ಕಾಲೇಜುಗಳ 800 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜನ್‌ ಪಿಳ್ಳೆ ಹಠಾತ್‌ ಸಾವು

ನವದೆಹಲಿ, ಜುಲೈ 7 (ಪಿಟಿಐ)– ಕುಖ್ಯಾತ ಉದ್ಯಮಿ ರಾಜನ್‌ ಪಿಳ್ಳೆ (47) ಇಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಯಕೃತ್ತಿನ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹೃದಯ ಚಿಕಿತ್ಸಾ ಸಂಸ್ಥೆಗೆ ಕಳಿಸಿಕೊಡುವಂತೆ ಪಿಳ್ಳೆ ಮಾಡಿದ್ದ ಮನವಿಯನ್ನು ವಿಶೇಷ ಕೋರ್ಟ್‌ ಬುಧವಾರ ತಿರಸ್ಕರಿಸಿತ್ತು.

22 ವರ್ಷಗಳ ಹಿಂದೆ ಕೇರಳದಿಂದ ಸಿಂಗಪುರಕ್ಕೆ ತೆರಳಿದ ಪಿಳ್ಳೆ ‘ಬ್ರಿಟಾನಿಯ ಫುಡ್ಸ್‌’ ಕಂಪನಿ ಸ್ಥಾಪಿಸಿ ‘ಬಿಸ್ಕತ್‌ ಕಿಂಗ್‌’ ಎಂದು ಖ್ಯಾತಿ ಪಡೆದರು. ಇವರ ಹಲವು ಕಂಪನಿಗಳು ಅಮೆರಿಕದ ಖ್ಯಾತ ಕಂಪನಿಗಳೊಂದಿಗೆ ವಿಲೀನಗೊಂಡಿವೆ. 3.15 ಕೋಟಿ ಸಿಂಗಪುರ ಡಾಲರ್‌ ವಂಚನೆ ಹಾಗೂ ಇತರ 23 ಮೋಸದ ಪ್ರಕರಣಗಳನ್ನು ಇವರ ಮೇಲೆ ಹೊರಿಸಿದ್ದ ಸಿಂಗಪುರ ಕೋರ್ಟ್‌, 14 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ಡಾಲರ್‌ ದಂಡ ವಿಧಿಸುವ ಸಾಧ್ಯತೆಯಿತ್ತು. ಆದರೆ ಅಷ್ಟರಲ್ಲೇ ಅವರು ಸಿಂಗಪುರದಿಂದ ಭಾರತಕ್ಕೆ ತಲೆ
ಮರೆಸಿಕೊಂಡು ಬಂದರು. ಭಾನುವಾರ ದೆಹಲಿಯ ಲೀ ಮೆರಿಡಿಯನ್‌ ಹೋಟೆಲ್‌ ನಲ್ಲಿ ಅವರನ್ನು ಬಂಧಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು