ಶುಕ್ರವಾರ, ನವೆಂಬರ್ 22, 2019
20 °C
ಭಾನುವಾರ, 6–11–1994

ಅಯೋಧ್ಯೆ ಭೂಮಿಗಾಗಿ 25 ವರ್ಷ ಹಿಂದೆಯೂ ಆಗ್ರಹಿಸಿದ್ದ ಪೇಜಾವರ ಶ್ರೀ

Published:
Updated:

ಅಯೋಧ್ಯಾಭೂಮಿ ಒಪ್ಪಿಸಲು ಪೇಜಾವರ ಶ್ರೀಗಳ ಆಗ್ರಹ

ಬೆಂಗಳೂರು, ನ. 5– ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಸಂತರಿಂದ ಕೂಡಿದ ಸ್ವತಂತ್ರ ಟ್ರಸ್ಟ್‌ಗೆ ತಕ್ಷಣ ಒಪ್ಪಿಸದಿದ್ದರೆ ಜನವರಿ 23– 24ರಂದು ನಡೆಯಲಿರುವ ಸಂತರ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೇಜಾವರ ಮಠಾಧೀಶ ಎಚ್.ಎಚ್. ವಿಶ್ವೇಶತೀರ್ಥ ಸ್ವಾಮೀಜಿ ಇಂದು ಇಲ್ಲಿ ತಿಳಿಸಿದರು.

‌ಶಂಕರಾಚಾರ್ಯರ ನೇತೃತ್ವದ ರಾಜಕೀ ಯೇತರ ಸಂತರ ಸಮಿತಿಗೆ ಈ ಜಾಗವನ್ನು ಒಪ್ಪಿಸುವುದು ಸಾಧ್ಯ ವಿಲ್ಲ ಎನ್ನುವುದಾದರೆ ಸರ್ಕಾರ ಮತ ಗಣನೆ ನಡೆಸಿ ಜನಾಭಿಪ್ರಾಯದಂತೆ ಮುಂದುವರಿಯಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಅನಂತ್ ಮಲ್ಲೇಶ್ವರದಿಂದ: ರಘುಪತಿ, ಲಕ್ಷ್ಮಿಸಾಗರ್‌ಗೆ ಕೊಕ್
ಬೆಂಗಳೂರು, ನ. 5– ಮಾಜಿ ಸಚಿವ ಎಂ. ರಘುಪತಿ ಅವರನ್ನು ಕೊನೆಗೂ ಕೈಬಿಟ್ಟು ಚಿತ್ರನಟ ಅನಂತನಾಗ್ ಅವರಿಗೆ ಮಲ್ಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವುದು ಜನತಾದಳದ ಮುಖಂಡರಲ್ಲೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ಮಾಡಿಕೊಟ್ಟಿದೆ.

ರಾಜ್ಯದ ಎಲ್ಲ ಅಭ್ಯರ್ಥಿಗಳ ಆಯ್ಕೆ ಆಖೈರುಗೊಂಡರೂ ಮಲ್ಲೇಶ್ವರ ಮತ್ತು ಬಸವನಗುಡಿ ಕ್ಷೇತ್ರಗಳ ವಿಚಾರದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಇಂದು ಬೆಳಿಗ್ಗೆಯವರೆಗೂ ಪಕ್ಷದ ಮುಖಂಡರು ಬಗೆಹರಿಸದೆ ಉಳಿಸಿಕೊಂಡಿದ್ದರು.

ಹಾಗೆಯೇ ಟಿಕೆಟ್ ವಂಚಿತರ ಪಟ್ಟಿಯಲ್ಲಿ ಮಾಜಿ ಸಚಿವ ಪ್ರೊ. ಎ.ಲಕ್ಷ್ಮಿಸಾಗರ್‌ ಅವರೂ ಸೇರಿದ್ದಾರೆ.

 

ಪ್ರತಿಕ್ರಿಯಿಸಿ (+)