ಮಂಗಳವಾರ, ನವೆಂಬರ್ 19, 2019
22 °C
1994

ಮುಂಬೈ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪ್ರಗತಿ: ವಿಶ್ವ ಪೊಲೀಸರಿಂದ ನಾಲ್ವರ ಸೆರೆ

Published:
Updated:

ಮುಂಬೈ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪ್ರಗತಿ: ವಿಶ್ವ ಪೊಲೀಸರಿಂದ ನಾಲ್ವರ ಸೆರೆ

ಲಂಡನ್, ಸೆ. 3 (ಪಿಟಿಐ)– ಮುಂಬೈ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ಶಂಕಿತ ಆರೋಪಿಗಳನ್ನು ಬಂಧಿಸಿರುವ ಇಂಟರ್‌ಪೋಲ್ ಅಧಿಕಾರಿಗಳು, ಅವರಿಂದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡ ಬಾಂಬ್ ಸ್ಫೋಟದ ಸಂಚಿನ ಪ್ರಮುಖ ಸೂತ್ರಧಾರ ಹಾಗೂ ಮುಖ್ಯ ಆರೋಪಿ ದಾವೂದ್ ಇಬ್ರಾಹಿಂ ಕೂಡ ಸೇರಿದ್ದಾನೆ ಎಂಬ ದಟ್ಟ ವದಂತಿ ಇಲ್ಲಿ ಹಬ್ಬಿದೆ. ಅವರ ಗುರುತುಗಳನ್ನು ಪತ್ತೆಹಚ್ಚಲು ವಶಪಡಿಸಿಕೊಂಡಿರುವ ದಾಖಲೆಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉತ್ತರಾಖಂಡ ಚಳವಳಿ: ಆತಂಕ

ನವದೆಹಲಿ, ಸೆ. 3 (ಪಿಟಿಐ, ಯುಎನ್‌ಐ)– ಪ್ರತ್ಯೇಕ ಉತ್ತರಾಖಂಡ ರಾಜ್ಯ ರಚನೆಗೆ ಒತ್ತಾಯಿಸಿ ಉತ್ತರ ಪ್ರದೇಶದಲ್ಲಿ ನಡೆ ದಿರುವ ಹಿಂಸಾತ್ಮಕ ಚಳವಳಿ ಮತ್ತು ಗುಡ್ಡ ಗಾಡು ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಡುತ್ತಿ ರುವ ಬಗ್ಗೆ ಪ್ರಧಾನಿ ಪಿ.ವಿ. ನರಸಿಂಹರಾವ್ ತೀವ್ರ ಕಳವಳಗೊಂಡಿದ್ದಾರೆ ಎನ್ನಲಾಗಿದೆ.

ಅಲ್ಲಿನ ಸ್ಥಿತಿ ಬಗ್ಗೆ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಪಿಸಿಸಿ ಅಧ್ಯಕ್ಷ ಎನ್.ಡಿ. ತಿವಾರಿ, ಆಂತರಿಕ ಭದ್ರತೆ ಸಚಿವ ರಾಜೇಶ್ ಪೈಲಟ್, ಹತ್ತನೇ ಹಣಕಾಸು ಆಯೋಗದ ಅಧ್ಯಕ್ಷ ಕೆ.ಸಿ. ಪಂತ್, ಮಾಜಿ ಸಚಿವ ಅಜಿತ್ ಸಿಂಗ್, ಹರೀಶ್ ರಾವತ್ ಪಾಲ್ಗೊಂಡಿದ್ದರು. ಗುಡ್ಡಗಾಡು ಜಿಲ್ಲೆಗಳಿಗೆ ಸೇರಿದ ತಿವಾರಿ, ಪಂತ್ ಮತ್ತು ರಾವತ್ ಪರಿಸ್ಥಿತಿ ಹೇಗೆ ಹದಗೆಡುತ್ತಿದೆ ಎಂಬುದನ್ನು ವಿವರಿಸಿದರು.

ಪ್ರತಿಕ್ರಿಯಿಸಿ (+)