ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಶನಿವಾರ 25–2–1995

Last Updated 24 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಾಜ್ಯಕ್ಕೆ ಅನ್ಯಾಯ ಆದರೆ ಶಾಸಕರ, ಸಚಿವರ ರಾಜೀನಾಮೆಗೆ ಕರೆ

ಬೆಂಗಳೂರು, ಫೆ. 24: ಬೆಳಗಾವಿಯ ವಿಭಜನೆ ಹಾಗೂ ಮಹಾಜನ್‌ ವರದಿಯನ್ನು ಕಡೆಗಣಿಸುವ ಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆಯೆಂಬ ವರದಿಗಳ ಬಗ್ಗೆ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ತೀವ್ರ ಕಳವಳ
ವ್ಯಕ್ತಪಡಿಸಿದರು.

ಮೈಸೂರಿನ ಹಿತವನ್ನು ಹಾಗೂ ವಿಧಾನ ಮಂಡಲವು ಮಹಾಜನ್‌ ಆಯೋಗದ ಶಿಫಾರಸುಗಳನ್ನು ಕಾರ್ಯಗತ ಮಾಡಬೇಕೆಂದು ಸ್ವೀಕರಿಸಿದ ನಿರ್ಣಯವನ್ನು ಕೇಂದ್ರ ಸರ್ಕಾರ ಕಡೆಗಣಿಸಿದಲ್ಲಿ ಪ್ರತಿಭಟಿಸಲು ಮಂತ್ರಿಮಂಡಲ ಮತ್ತು ಶಾಸಕರು ಸಾಮೂಹಿಕ ರಾಜೀನಾಮೆ ಸಲ್ಲಿಸಬೇಕೆಂಬ ಕರೆ ಕೇಳಿಬಂತು.

ರಾಜ್ಯದ ಹೊಸ ತೆರಿಗೆ ಸಲಹೆ: ಸ್ಪಷ್ಟನೆ

ಬೆಂಗಳೂರು, ಫೆ. 24: ಅರ್ಥ ಸಚಿವರು ನಿನ್ನೆ ಹೊಸ ವರ್ಷದ ಬಜೆಟ್‌ನಲ್ಲಿ ಪ್ರಕಟಿಸಿದ ಪ್ರಕಾರ, ಕಾರ್ಪೊರೇಷನ್‌ ಹಾಗೂ ಮುನಿಸಿಪಲ್‌ ಪ್ರದೇಶಗಳಲ್ಲಿ ಜನರು ನೀಡುತ್ತಿರುವ ಸ್ವತ್ತಿನ ತೆರಿಗೆ ಮೇಲೆ (ಮನೆ ಕಂದಾಯ) ಶೇಕಡ 50ರಷ್ಟು ಸರ್‌ಚಾರ್ಜ್‌ ವಿಧಿಸಲಾಗುವುದು, ಅಂದರೆ ಈ ತೆರಿಗೆ ಅದರ ಅರ್ಧದಷ್ಟು ಹೆಚ್ಚುವುದು.

ಗ್ರಾಹಕರು, ಕೈಗಾರಿಕೆಗಳು, ಸಂಘ ಸಂಸ್ಥೆಗಳು ಬಳಸುವ ವಿದ್ಯುಚ್ಛಕ್ತಿ ಪ್ರಮಾಣದ ಮೇಲೆ ಒಂದು ಯುನಿಟ್‌ಗೆ ಪರಮಾವಧಿ 3 ಪೈಸೆಯವರೆಗೆ ಈಗ ತೆರಿಗೆ ವಿಧಿಸಲಾಗುತ್ತಿದೆ.

ಮಹಾಜನ್‌ ಸೂಚನೆಗಿಂತ ಕೇವಲ 8 ಹೆಚ್ಚು ಗ್ರಾಮ ನಮಗೆ: ಬೆಳಗಾವಿಯ ಭಾಗ ಸೇರಿ 233 ಹಳ್ಳಿ ಅವರಿಗೆ

ಬೆಂಗಳೂರು, ಫೆ. 24: ಪ್ರಧಾನಿ ಸಲಹೆಗಳ ರೀತ್ಯ ಮಹಾಜನ್‌ ಆಯೋಗ ಶಿಫಾರಸು ಮಾಡಿರುವುದಕ್ಕಿಂತ ಕೇವಲ 8 ಗ್ರಾಮಗಳು (ಜನಸಂಖ್ಯೆ 10,579) ಮೈಸೂರು ರಾಜ್ಯಕ್ಕೆ ಬಂದರೆ, 2,48,230 ಜನಸಂಖ್ಯೆಯ 233ಕ್ಕೂ ಹೆಚ್ಚು ಗ್ರಾಮಗಳು ಜೊತೆಗೆ ಸುಮಾರು ಮೂರನೇ ಒಂದು ಭಾಗದಷ್ಟು ಬೆಳಗಾವಿ ನಗರವು ಮಹಾರಾಷ್ಟ್ರಕ್ಕೆ ವರ್ಗಾಯಿಸಲ್ಪಡುವುದೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT