ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಗುರುವಾರ, ಜೂನ್‌ 22 1995

Last Updated 21 ಜೂನ್ 2020, 15:45 IST
ಅಕ್ಷರ ಗಾತ್ರ

ಜಪಾನ್‌ ವಿಮಾನ ಅಪಹರಣ– 365 ಜನ ಒತ್ತೆ

ಟೋಕಿಯೊ, ಜೂನ್‌ 21 (ಎಎಫ್‌ಪಿ)– ಜಪಾನ್‌ನ ಉಗ್ರವಾದಿ ಓಂ ಪಂಥದವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಇಂದು ಆಲ್ ನಿಪ್ಪಾನ್‌ ಏರ್‌ವೇಸ್‌ನ ವಿಮಾನವನ್ನು ಅಪಹರಿಸಿ ಚಾಲಕ ಸಿಬ್ಬಂದಿ ಸೇರಿದಂತೆ 365 ಪ್ರಯಾಣಿಕರನ್ನು ಒತ್ತೆಯಿರಿಸಿಕೊಂಡಿದ್ದಾನೆ.

ವಿಮಾನದಲ್ಲಿ 350 ಮಂದಿ ಪ್ರಯಾಣಿಕರು ಹಾಗೂ 15 ಮಂದಿ ಚಾಲಕ ಸಿಬ್ಬಂದಿ ಇದ್ದಾರೆ. ವಿಮಾನ ಟೋಕಿಯೊದಿಂದ ಹಕೋಡೇಟ್‌ಗೆ ಪ್ರಯಾಣಿಸುತ್ತಿತ್ತು. ಸಬುರೋ ಕೊಮಾಯಿಷಿ ಎಂಬ ಈ ಅಪಹರಣಕಾರ ಆಕಾಶಗಾಮಿ ವಿಮಾನದಲ್ಲಿ ಮೊದಲು ಒಬ್ಬ ಪರಿಚಾರಿಕೆಯನ್ನು ಬೆದರಿಸಿದ ಎನ್ನಲಾಗಿದೆ. ಅಪಹರಣಕಾರನ ಬೇಡಿಕೆ ಎಂದರೆ, ಬಂಧಿತ ಓಂ ಪಂಥದ ಗುರು ಶೋಕೋ ಅಸಹರನನ್ನು ಬಿಡುಗಡೆ ಮಾಡಬೇಕು ಎಂಬುದಾಗಿದೆ. ಟೋಕಿಯೊದಲ್ಲಿ ನಡೆದ ಅನಿಲ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಸಹರ ಈಗ ಪೊಲೀಸ್ ವಶದಲ್ಲಿದ್ದಾನೆ. ಈ ಅನಿಲ ಸೋರಿಕೆಯಲ್ಲಿ 11 ಜನ ಸತ್ತಿದ್ದರು.

ನಕಲಿ ಷೇರು ಜಾಲ ಪತ್ತೆ

ಮುಂಬೈ, ಜೂನ್‌ 21 (ಪಿಟಿಐ)– ಪ್ರಮುಖ ಕಂಪನಿಗಳ ನಕಲಿ ಷೇರು ಸರ್ಟಿಫಿಕೇಟ್‌ಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಭೇದಿಸಿರುವ ಮುಂಬೈ ಪೊಲೀಸರು ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ನಕಲಿ ಷೇರುಪತ್ರಗಳನ್ನು ಶರ್ಮಾ ಎಂಬ ಒಬ್ಬಾತನಿಂದ ಪಡೆದು, ಆಯಾ ಕಂಪನಿಯ ಮಾರುಕಟ್ಟೆ ಬೆಲೆಯ ಕೇವಲ ಶೇ 8ರಷ್ಟಕ್ಕೆ ಅವುಗಳನ್ನು ಮಾರುತ್ತಿದ್ದುದು ಗೊತ್ತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT