ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಸೋಮವಾರ, ಜೂನ್‌ 26 1995

Last Updated 25 ಜೂನ್ 2020, 15:01 IST
ಅಕ್ಷರ ಗಾತ್ರ

ಪಡಿತರ ಪದ್ಧತಿ ಸುಧಾರಣೆಗೆ ಸಲಹೆ

ನವದೆಹಲಿ, ಜೂನ್‌ 25 (ಯುಎನ್‌ಐ)– ಮೂರೂವರೆ ವರ್ಷಗಳ ಹಿಂದೆ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರು ಉದ್ಘಾಟಿಸಿದ, ಸಮಾಜದ ದುರ್ಬಲ ವರ್ಗಗಳನ್ನು ಗುರಿಯಾಗುಳ್ಳ ಸುಧಾರಿತ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನಾಲ್ಕು ಪ್ರಮುಖ ದೋಷಗಳು ಕಂಡುಬಂದಿವೆ ಎಂದು ಯೋಜನಾ ಆಯೋಗದ ಕಾರ್ಯಕ್ರಮ ಮೌಲ್ಯಮಾಪನ ವಿಭಾಗ ತಿಳಿಸಿದೆ.

ನಕಲಿ ಪಡಿತರ ಚೀಟಿಗಳ ಹಾವಳಿ, ಆಹಾರಧಾನ್ಯ ದಾಸ್ತಾನಿಗೆ ಸೌಲಭ್ಯಗಳ ಅಭಾವ, ಕೆಲಸ ಮಾಡದೇ ಇರುವ ಜಾಗೃತ ಸಮಿತಿಗಳು ಹಾಗೂ ಎಲ್ಲಾ ಅರ್ಹ ಕುಟುಂಬಗಳಿಗೆ ಪಡಿತರ ಚೀಟಿ ದೊರಕದೇ ಇರುವುದು– ಇವು ಈ ನಾಲ್ಕು ದೋಷಗಳು ಎಂದು ಪಟ್ಟಿ ಮಾಡಲಾಗಿದೆ.

ಸ್ವಾತಂತ್ರ್ಯದಲ್ಲಿ ಮೌನವೂ ಧ್ವನಿಯೇ...

ಬೆಂಗಳೂರು, ಜೂನ್‌ 25– ‘ಸ್ವಾತಂತ್ರ್ಯ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅದನ್ನು ಜೈಲಿನಲ್ಲಿ ಕೂಡಿಡುವುದು ಎಂದೆಂದಿಗೂ ಸಾಧ್ಯವಿಲ್ಲ. ಸ್ವಾತಂತ್ರ್ಯದಲ್ಲಿ ಮೌನವೂ ಧ್ವನಿಯೇ’.

ತೆರೆದ ಎದೆ, ಬಿಗಿದು ಕಟ್ಟಿದ ಕಚ್ಚೆ ಪಂಚೆ, ಹೆಗಲ ಮೇಲಿಂದ ಧಾರೆಯಂತೆ ಇಳಿದ ಕಂಬಳಿ, ಕೈಯಲ್ಲಿ ಕೆಂಬಾವುಟ ಹಾರಿಸುತ್ತಾ, ಕ್ರಾಂತಿ ಕಹಳೆಯಂಥಾ ಸ್ವಾತಂತ್ರ್ಯದ ಕನಸನ್ನು ಚಿಗುರಿಸುವ ಈ ಅರ್ಥ ಮೂಡಿಬರುವ ಹಾಡೊಂದರ ಮೂಲಕ ಕ್ರಾಂತಿಕಾರಿ ಕವಿ, ಗಾಯಕ ಗದ್ದರ್‌ ಇಂದು ಜನೋತ್ಸವ ಹಾಗೂ ರಂಗ ನಿರಂತರ ಸಂಘಟಿಸಿದ ಸ್ವಾತಂತ್ರ್ಯ ಹಬ್ಬವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT