ಬುಧವಾರ, ಜುಲೈ 28, 2021
25 °C

25 ವರ್ಷಗಳ ಹಿಂದೆ | ಗುರುವಾರ, 6–7–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿಯಲ್ಲಿ ಗೌಡರಿಗೆ ಘೇರಾವ್‌: ಲಾಠಿ ಪ್ರಹಾರ

ಮಡಿಕೇರಿ, ಜುಲೈ 5– ಮುಖ್ಯಮಂತ್ರಿ ಆದ ಮೇಲೆ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಎಚ್‌.ಡಿ.ದೇವೇಗೌಡ ಅವರನ್ನು ಸುಮಾರು ಅರ್ಧಗಂಟೆ ಕಾಲ ಘೇರಾವ್‌ ಮಾಡಿದ ಕೊಡಗು ಜಿಲ್ಲಾ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಇಂದು ಇಲ್ಲಿ ಲಾಠಿ ಪ್ರಹಾರ ಮಾಡಿದರು.

‘ಜನತಾ ದರ್ಶನ’ ಕಾರ್ಯಕ್ರಮಕ್ಕೆಂದು ದೇವೇಗೌಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಇರುವ ಕೋಟೆ ಆವರಣಕ್ಕೆ ಬಂದಾಗ, ಕಪ್ಪು ಬಾವುಟ ಹಿಡಿದು ಜಮಾ ಯಿಸಿದ್ದ ನೂರಾರು ಪ್ರದರ್ಶನಕಾರರಿಂದ ತೀವ್ರ ಆಕ್ರೋಶ ಎದುರಿಸಬೇಕಾಯಿತು.

ಕಾಫಿ ತೆರಿಗೆ ಇಳಿಸಬೇಕು ಎಂಬುದೂ ಸೇರಿದಂತೆ ಜಿಲ್ಲೆಯ ಬೇಡಿಕೆಗಳ ಬಗ್ಗೆ ಕಳೆದ ಮಾರ್ಚ್‌ 23ರಿಂದ ಹಂತ ಹಂತವಾಗಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದ ಬೆಳೆಗಾರ ರೊಂದಿಗೆ ಇದಕ್ಕೆ ಮುನ್ನ ಮುಖ್ಯಮಂತ್ರಿ ನಡೆಸಿದ ಸಂಧಾನ ಮಾತುಕತೆ ವಿಫಲವಾಯಿತು.

ಹುಬ್ಬಳ್ಳಿ ಬಳಿ ರೈಲಿನಲ್ಲಿ ಮತ್ತೆ ದರೋಡೆ

ಹುಬ್ಬಳ್ಳಿ, ಜುಲೈ 5– ಧಾರವಾಡ ಮತ್ತು ಗದಗದಲ್ಲಿ ಕಳೆದ ಒಂದು ತಿಂಗಳಲ್ಲಿ ಸಂಭವಿಸಿದ ಎರಡು ರೈಲು ದರೋಡೆಗಳ ನೆನಪು ಮಾಸುವ ಮೊದಲೇ ಇಂದು ಮುಂಜಾನೆ 6.30ರ ಹೊತ್ತಿಗೆ ಹುಬ್ಬಳ್ಳಿಗೆ ಸಮೀಪದ ಕುಸುಗಲ್‌ನಲ್ಲಿ ಗುಂತಕಲ್‌– ಹುಬ್ಬಳ್ಳಿ ಪ್ಯಾಸೆಂಜರ್‌ ರೈಲುಗಾಡಿಯಲ್ಲಿ ದರೋಡೆ ನಡೆದಿದೆ.

ನಾಲ್ಕು ಮಂದಿಯಿದ್ದ ದರೋಡೆ ಕೋರರ ತಂಡ ಬಳ್ಳಾರಿಯ ಮಲ್ಲಿಕಾರ್ಜುನ (25) ಎಂಬ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ ಅವರ ಬಳಿ ಇದ್ದ 2,500 ರೂಪಾಯಿ ನಗದು ಮತ್ತು ಒಂದು ತೊಲ ಬಂಗಾರವನ್ನು ಕಿತ್ತುಕೊಂಡಿದೆ ಎಂದು ರೈಲ್ವೆ ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು