ಶುಕ್ರವಾರ, ಅಕ್ಟೋಬರ್ 23, 2020
28 °C

25 ವರ್ಷಗಳ ಹಿಂದೆ | ಸೋಮವಾರ, 2–10–1995

25 ವರ್ಷಗಳ ಹಿಂದೆ Updated:

ಅಕ್ಷರ ಗಾತ್ರ : | |

ರಾಷ್ಟ್ರದಲ್ಲೇ ಪ್ರಥಮ ಕೃಷಿ ನೀತಿಗೆ ಅಂಗೀಕಾರ

ಬೆಂಗಳೂರು, ಅ. 1– ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡುವ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ರೂಪಿಸಿರುವ ಮಹತ್ವಾಕಾಂಕ್ಷೆಯ ಕೃಷಿ ನೀತಿಯನ್ನು ಸರ್ಕಾರ ಅಂಗೀಕರಿಸಿದೆ. ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ ಅಂದಾಜು 1,000 ಕೋಟಿ
ರೂಪಾಯಿ ಬಂಡವಾಳ ತೊಡಗಿಸುವ ಉದ್ದೇಶದೊಡನೆ ಈ ನೀತಿ ಜಾರಿಗಾಗಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ.

ಇಂದು ಇಲ್ಲಿ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದ ಕೃಷಿ ಸಚಿವ ಸಿ.ಬೈರೇಗೌಡ ಅವರು, ರಾಷ್ಟ್ರದಲ್ಲಿಯೇ ಕೃಷಿ ನೀತಿ ಅಳವಡಿಸಿಕೊಂಡ ಪ್ರಪ್ರಥಮ ರಾಜ್ಯ ನಮ್ಮದು ಎಂದು ಹೆಮ್ಮೆಪಟ್ಟರು.

ಕಟ್ಟಾ ಉಗ್ರರ ಶರಣು

ಶ್ರೀನಗರ, ಅ. 1 (ಪಿಟಿಐ, ಯುಎನ್‌ಐ)– ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಅರಗಾಂ ಮತ್ತು ಮಲಂಗಾಂಗಳಲ್ಲಿ ಇಂದು ಒಟ್ಟು 99 ಕಟ್ಟಾ ಉಗ್ರಗಾಮಿಗಳು ಶಸ್ತ್ರಾಸ್ತ್ರ ಸಹಿತ ಸೇನೆಗೆ ಶರಣಾಗಿ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರುವ ಪಣತೊಟ್ಟರು.

ಅಕ್ರಮ ಗ್ರಾನೈಟ್‌: ಸಿಓಡಿ ತನಿಖೆಗೆ

ಬೆಂಗಳೂರು, ಅ. 1– ಕನಕಪುರ ತಾಲ್ಲೂಕಿನ ನಿಡುಗಲ್ಲು ಮತ್ತು ಯಡಮಾರನಹಳ್ಳಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಗ್ರಾನೈಟ್‌ ತೆಗೆದಿರುವ ‍ಪ್ರಕರಣಗಳನ್ನು ಪತ್ತೆ ಹಚ್ಚಿದ,  ಗ್ರಾನೈಟ್‌ ಹಗರಣದ ಬಗ್ಗೆ ತನಿಖೆಗೆ ನೇಮಕಗೊಂಡಿರುವ ವಿಧಾನ ಮಂಡಲದ ಜಂಟಿ ಸದನ ಸಮಿತಿ ಕೆಲವನ್ನು ಸಿಓಡಿ ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು