ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಗುರುವಾರ, 8–9–1994

Published:
Updated:

ಶೇ. 80 ಮೀಸಲಿಗೆ ಮಸೂದೆ ಮಂಡನೆ: ಪ್ರತಿಪಕ್ಷ ಸಭಾತ್ಯಾಗ

ಬೆಂಗಳೂರು, ಸೆ. 7– ವಿರೋಧ ಪಕ್ಷಗಳ ಪ್ರತಿಭಟನೆ, ಸಭಾತ್ಯಾಗದ ನಡುವೆ ಬಹಮತದ ಮೂಲಕ ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದ ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿಯನ್ನು ಶೇ. 80ಕ್ಕೆ ಏರಿಸುವ ಮಸೂದೆಗೆ ಅಂಗೀಕಾರ ಪಡೆಯಲು ಮುಂದಾಗದೆ ಸರ್ಕಾರ ಕೊನೆಗಳಿಗೆಯಲ್ಲಿ ಹಿಂದೆ ಸರಿಯಿತು. ರಾಜಕೀಯ ದುರುದ್ದೇಶದಿಂದ ಈ ಮಸೂದೆ ತರಲಾಗುತ್ತಿದೆ ಎಂದು ಸದಸ್ಯರು ಆಪಾದಿಸಿದರು.

ಮೂರು ಕಾಸಿನ ಬೆಲೆ ಇಲ್ಲದ ಮಸೂದೆ: ಹೆಗಡೆ

ಬೆಂಗಳೂರು, ಸೆ. 7– ಪರಿಶಿಷ್ಟ ಜಾತಿ–ಪರಿಶಿಷ್ಟ ಬುಡಕಟ್ಟು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಹಾಗೂ ನೇಮಕಾತಿ ಮೀಸಲು ಏರಿಕೆ ಕುರಿತ ಮಸೂದೆಯನ್ನು ಅಂಗೀಕರಿಸುವುದರಿಂದ ಮೂರು ಕಾಸಿನ ಬೆಲೆ ಇರೋಲ್ಲ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಇಂದು ವಿಧಾನಸಭೆಯಲ್ಲಿ ಸರ್ಕಾರವನ್ನು ಛೇಡಿಸಿದರು.

ಇದರಿಂದ ಯಾವುದು ಉದ್ದೇಶ, ದುರುದ್ದೇಶ ಎಂಬುದು ಗೊತ್ತಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಕೆಲವರ ಕಣ್ಣಿಗೆ ಧೂಳು ಹಾಕುವಂತಹ ಕೆಲಸ ಆಗುತ್ತದೆ’ ಎಂದು ಅವರು ತರಾಟೆಗೆ ತೆಗೆದುಕೊಂಡರು.

Post Comments (+)